ADVERTISEMENT

ಕೆಆರ್‌ಎಸ್: ಒಳ ಹರಿವು ಇಳಿಮುಖ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 8:30 IST
Last Updated 15 ಆಗಸ್ಟ್ 2012, 8:30 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. 

ಆ.8ರಂದು 31,662 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಮಂಗಳವಾರದ ವೇಳೆಗೆ 13,210 ಕ್ಯೂಸೆಕ್‌ಗೆ ಇಳಿದಿದೆ. ಆ.9ರಂದು ಒಂದೇ ದಿನ 3 ಅಡಿಗಳಷ್ಟು ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಆದರೆ ಕಳೆದ ಮೂರು ದಿನಗಳಲ್ಲಿ ಕೇವಲ 2.5 ಅಡಿಗಳಷ್ಟು ಮಾತ್ರ ನೀರು ಹರಿದು ಬಂದಿದೆ. ಜಲಾಶಯದಿಂದ 350 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.   ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 123.85 ಅಡಿ ನೀರು ಸಂಗ್ರಹವಾಗಿತ್ತು. 13,774 ಕ್ಯೂಸೆಕ್ ಒಳ ಹರಿವು ಹಾಗೂ 8,512 ಕ್ಯೂಸೆಕ್ ಹೊರ ಹರಿವು ಇತ್ತು.

ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಬೆಳೆ ಬೆಳೆಯಲು 65 ಟಿಎಂಸಿ ನೀರಿನ ಅಗತ್ಯವಿದೆ. ಆದರೆ ಜಲಾಶ ಯದಲ್ಲಿ ಸದ್ಯ 15 ಟಿಎಂಸಿ ಮಾತ್ರ ನೀರು ಇದೆ. ಮುಂಗಾರು ಹಂಗಾಮು ಬೆಳೆಗೆ ಈಗಿರುವ ನೀರು ಸಾಲುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.