ADVERTISEMENT

ಕೈಲಾಸಂ ಜನ್ಮದಿನೋತ್ಸವ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 9:33 IST
Last Updated 2 ಆಗಸ್ಟ್ 2013, 9:33 IST

ನಾಗಮಂಗಲ :  ಕನ್ನಡಕ್ಕೊಬ್ಬನೇ ಕೈಲಾಸಂ ಎಂದು ಎಲ್ಲರಿಂದಲೂ ಪ್ರಶಂಸೆಗೆ ಒಳಗಾದವರು ಟಿ.ಪಿ. ಕೈಲಾಸಂ ಎಂದು ನಾಗಮಂಗಲ ಸರ್ಕಾರಿ ಶಿಕ್ಷಕರ ಪ್ರಶಿಕ್ಷಣ ಸಂಸ್ಥೆಯ ಉಪನ್ಯಾಸಕ ಎಸ್. ಲೋಕೇಶ್ ಅಭಿಪ್ರಾಯಪಟ್ಟರು.

ಬುಧವಾರ ನಾಗಮಂಗಲ ಕನ್ನಡ ಸಂಘವು ಮೈಲಾರಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಟಿ.ಪಿ. ಕೈಲಾಸಂ ಜನ್ಮದಿನೋತ್ಸವದಲ್ಲಿ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಶಿಕ್ಷಣಾಧಿಕಾರಿ      ಕಿ.ನಾ. ಲಕ್ಷ್ಮೀನಾರಾಯಣ ಮಾತನಾಡಿ, ನಾಟಕ ಮಂದಿರವನ್ನು ವೈಚಾರಿಕ ಮಂದಿರವನ್ನಾಗಿ ಮಾಡುವಲ್ಲಿ ಕೈಲಾಸಂ ಪಾತ್ರ ಹಿರಿದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ    ಎಂ.ಆರ್. ಅನಂತರಾಜು ಮಾತನಾಡುತ್ತಾ, ಹಾಸ್ಯ ಸಾಹಿತ್ಯದ ಕೊರತೆ ಇದ್ದ ಸಮಯದಲ್ಲಿ ಕೈಲಾಸಂ ಹಾಸ್ಯದೊಂದಿಗೆ ವಿಮರ್ಶೆಯ ನೋಟದಲ್ಲಿ ನಾಟಕಗಳನ್ನು ರಚಿಸಿದರು. ಮಧ್ಯಮ ವರ್ಗದ ಜೀವನವನ್ನು, ಅವರ ಸಮಸ್ಯೆಗಳನ್ನು ರಂಗರೂಪಕ್ಕಿಳಿಸಿ, ಪರಿಹಾರವನ್ನು ಹುಡುಕುವ ಯತ್ನ ಅವರ ನಾಟಕಗಳಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅರಟ್ಟಿಕೊಪ್ಪಲು ಗ್ರಾಮದ ಸಮಾಜ ಸೇವಕ ಪದ್ಮನಾಭ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಪುಸ್ತಕಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷ ಎಂ.ಎನ್. ಮಂಜುನಾಥ್, ಪ್ರೌಢಶಾಲಾ ಹಿರಿಯ ಶಿಕ್ಷಕಿ ಫಾಜಿಲಾಬಾನು, ಮಂಜೇಗೌಡ, ಶಂಕರ್‌ಗಜಪತಿ, ಮತ್ತಿತರ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಾದ ವಿಶಾಲಾಕ್ಷಿ ಸ್ವಾಗತಿಸಿ, ಪುಷ್ಪತಲಾ ವಂದಿಸಿದ ಕಾರ್ಯಕ್ರಮವನ್ನು ಸ್ಫೂರ್ತಿ ಮತ್ತು ಚಿರಂಜೀವಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.