ADVERTISEMENT

ಚಾಮುಂಡೇಶ್ವರಿಗೆ ನೋಟುಗಳ ಅಲಂಕಾರ!

​ಪ್ರಜಾವಾಣಿ ವಾರ್ತೆ
Published 28 ಜುಲೈ 2012, 9:25 IST
Last Updated 28 ಜುಲೈ 2012, 9:25 IST
ಚಾಮುಂಡೇಶ್ವರಿಗೆ ನೋಟುಗಳ ಅಲಂಕಾರ!
ಚಾಮುಂಡೇಶ್ವರಿಗೆ ನೋಟುಗಳ ಅಲಂಕಾರ!   

ಶ್ರೀರಂಗಪಟ್ಟಣ: ವರಮಹಾಲಕ್ಷ್ಮಿ ವ್ರತದ ಹಿನ್ನೆಲೆಯಲ್ಲಿ ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ಚಾಮುಂಡೇಶ್ವರಿ ದೇವಿಗೆ ಶುಕ್ರವಾರ ನೋಟುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

  ವಿಗ್ರಹ ಮತ್ತು ಪ್ರಭಾವಗಳಿಗೆ 1000, 500, 100, 50, 20, 10 ಹಾಗೂ 5 ರೂಪಾಯಿಗಳ ನೋಟುಗಳಿಂದ ಅಲಂಕರಿಸಿ ಪೂಜಿಸಲಾಯಿತು. ನೋಟು ಅಲಂಕಾರಕ್ಕಾಗಿ ಒಟ್ಟು ರೂ.3ಲಕ್ಷ 25 ಸಾವಿರ ಹಣ ಬಳಸಲಾಗಿತ್ತು. ಬಗೆ ಬಗೆಯ ಬಣ್ಣದ ನೋಟುಗಳ ಅಲಂಕಾರದಿಂದ ಚಾಮುಂಡೇಶ್ವರಿಗೆ ಇನ್ನಿಲ್ಲದ ಕಳೆ ಬಂದಿತ್ತು. ನೋಟುಗಳಿಂದ ಕಂಗೊಳಿಸುತ್ತಿದ್ದ ಅಪೂರ್ವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.

  ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀಶ ಇತರರು ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಅಲಂಕರಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕಾಲು, ಕರ, ಶಿರ, ಕಿರೀಟ, ಉಡುಪು ಸೇರಿದಂತೆ ಎಲ್ಲ ಭಾಗಗಳನ್ನು ಬಣ್ಣಕ್ಕೆ ಹೊಂದುವಂತೆ ಅಲಂಕರಿಸಿದ್ದೇವೆ. ಭಕ್ತರಿಂದ ಹಣ ಪಡೆದು ಅಲಂಕಾರಕ್ಕೆ ಬಳಸಿದ್ದೇವೆ. ವ್ರತ ಮುಗಿದ ನಂತರ ಹಿಂದಿರುಗಿಸುತ್ತೇವೆ ಎಂದು ಲಕ್ಷ್ಮೀಶ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.