ADVERTISEMENT

ತಾ.ಪಂಚಾಯಿತಿ ಸದಸ್ಯರಿಂದ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 10:05 IST
Last Updated 12 ಮಾರ್ಚ್ 2011, 10:05 IST

ಪಾಂಡವಪುರ: ಮಾತನಾಡಿದರೆ ಸಭಾಂಗಣ ಪ್ರತಿಧ್ವನಿಸುತ್ತದೆ, ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಿಸು ವುದಿಲ್ಲ, ಸಭೆ ನಡೆಸಲು ವ್ಯವಸ್ಥಿತವಾಗಿ ಸಜ್ಜುಗೊಳಿಸಿಲ್ಲ ಎಂದು ಬೇಸರ ಗೊಂಡು ತಾ.ಪಂ ಸದಸ್ಯರೊಬ್ಬರು ಸಭಾತ್ಯಾಗ ಮಾಡಿ ಹೊರನಡೆದ ಪ್ರಸಂಗ ನಡೆಯಿತು. ಶುಕ್ರವಾರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಸಾಮಾನ್ಯ ಸಭೆ ಪ್ರಾರಂಭವಾಯಿತು. ಈ ಸಭೆ ಕೆಲ ಸಮಯ ಸರಿಯಾಗಿ ನಡೆಯಿತು. ನಂತರ ಈ ಸಭಾಂಗಣವೇ ಸರಿಯಿಲ್ಲ, ಮೊದಲು ಈ ಸಭೆ ಬೇರೆಡೆ ನಡೆಸಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು.

ಆದರೂ ಸಹ ಸಭೆ ಮುಂದುವರೆದಾಗ ಬೇಸತ್ತು ಸಭಾತ್ಯಾಗ ಮಾಡಿ ಹೊರನಡೆದ ತಾ.ಪಂ ಸದಸ್ಯೆ ಶೈಲಜಾ ಗೋವಿಂದರಾಜ್ ಸಭೆಯ ಸ್ಥಳವನ್ನು ಸ್ಥಳಾಂತರಿಸಬೇಕೆಂದು ತೀವ್ರವಾಗಿ ಒತ್ತಾಯಿಸಿದರು. ಇವರೊಂದಿಗೆ ಸದಸ್ಯೆ ವಿಜಯಪ್ರಕಾಶ್ ಕೂಡ ಸಭೆಯನ್ನು ಸ್ಥಳಾಂತರಿಸಲು ಪಟ್ಟು ಹಿಡಿದರು. ಇಬ್ಬರು ಸದಸ್ಯರು ಹೊರನಡೆದ ನಂತರ ಅಧ್ಯಕ್ಷೆ ಮಹಾಲಕ್ಷ್ಮಿ ಸಭೆಯ ಸ್ಥಳವನ್ನು ಸ್ಥಳಾಂತರಿಸುವಂತೆ ಕಾರ್ಯ ನಿರ್ವಾಹಣಾಧಿಕಾರಿ ಡಾ.ವೆಂಕಟೇಶ ಪ್ಪಗೆ ಸೂಚಿಸಿದರು. ನಂತರ ತಾ.ಪಂ. ಯಲ್ಲಿರುವ ಇನ್ನೊಂದು ಕೊಠಡಿಗೆ ಇಡೀ ಸಭೆಯನ್ನು ಸ್ಥಳಾಂತರಿಸಿ ಪುನಃ ಸಭೆಯನ್ನು ನಡೆಸಲಾಯಿತು.

ಕ್ಯಾತನಹಳ್ಳಿ ತಾ.ಪಂ ಸದಸ್ಯ ಗೌಡೇಗೌಡ ಮಾತನಾಡಿ, ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯುತ್ ಸರಬರಾಜನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿದರು. ಸದಸ್ಯ ಯಶವಂತ್ ಮಾತನಾಡಿ, ಬನ್ನಂಗಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿವಾಸಗಳು ಹದ ಗೆಟ್ಟಿದ್ದು, ವೈದ್ಯರು ಉಳಿದುಕೊಳ್ಳಲು ಕಷ್ಟವಾಗುತ್ತಿದೆ. ರೋಗಿಗಳು ಪರ ದಾಡುವ ಪರಿಸ್ಥಿತಿಯಿದೆ. ತಕ್ಷಣ ದುರಸ್ತಿ ಕೆಲಸ ಮಾಡಬೇಕೆಂದು ಕೋರಿದರು.

ವೈದ್ಯಾಧಿಕಾರಿ ಡಾ.ಮರೀಗೌಡ ಮಾತನಾಡಿ, ಜಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಇದರಿಂದಾಗಿ ಆಸ್ಪತ್ರೆ ರದ್ದಾಗುವ ಪರಿಸ್ಥಿತಿಯಿದೆ. ಆದರಿಂದ ಆ ಭಾಗದ ಸದಸ್ಯರು ಸಮುದಾಯದಿಂದ ಒಂದು ಲಕ್ಷ ರೂ. ದೇಣಿಗೆ ಸಂಗ್ರಹಿಸಿದರೆ ಇನ್ನುಳಿದ ಹಣವನ್ನು ಆರೋಗ್ಯ ಇಲಾಖೆ ಭರಿಸುತ್ತದೆ ಎಂದು ವಿವರಿಸಿ ದರು. 13ನೇ ಹಣಕಾಸು ಯೋಜನೆ ಯಲ್ಲಿ 23.25 ಲಕ್ಷ ರೂ. ಹಾಗೂ 8.22 ಲಕ್ಷ ರೂ.ಗಳಿದ್ದು ಈ ಹಣವನ್ನು ಸಮಾನವಾಗಿ ಪ್ರತಿ ಸದಸ್ಯರ ಕ್ಷೇತ್ರದ ಅಭಿವೃದ್ಧಿಗೆ ಬಳಸಲು ಸಭೆಯಲ್ಲಿ ಸಾಮೂಹಿಕವಾಗಿ ತೀರ್ಮಾನಿಸಲಾಯಿತು.

ಸ್ಥಾಯಿ ಸಮಿತಿಯ ರಚನೆಯನ್ನು ಸದಸ್ಯರೆಲ್ಲರೂ ಒಟ್ಟುಗೂಡಿ ರಚಿಸಿ ಕೊಳ್ಳಬೇಕೆಂದು ತೀರ್ಮಾನಿಸಿ ತಾ.ಪಂ ಸಭೆಯ ಆಹ್ವಾನಿತ ಸದಸ್ಯರನ್ನಾಗಿ ಒಂದು ವರ್ಷದ ಅವಧಿಗೆ ಟಿ.ಎಸ್. ಛತ್ರ, ಚಿನಕುರಳಿ, ನಾರಾಯಣಪುರ, ದೊಡ್ಡಬ್ಯಾಡರಹಳ್ಳಿ, ಕಟ್ಟೇರಿ ಗ್ರಾ.ಪಂ ಅಧ್ಯಕ್ಷರನ್ನು ನೇಮಿಸಿ ಕೊಳ್ಳಲಾಯಿತು. ಈ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಮೇಲೆ ಷೋಕಾಸ್ ನೋಟಿಸ್ ಜಾರಿ ಗೊಳಿಸಲು ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.