ADVERTISEMENT

ಪ್ರತಿ ಮನೆಯಲ್ಲೂ ಶೌಚಾಲಯ:ಸಲಹೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:00 IST
Last Updated 18 ಫೆಬ್ರುವರಿ 2011, 7:00 IST

ಮಂಡ್ಯ:  ನೈರ್ಮಲ್ಯ ರಕ್ಷಣೆ ದೃಷ್ಟಿಯಿಂದ ಶೌಚಾಲಯ ಹೊಂದುವುದು ಅಗತ್ಯವಾಗಿದ್ದು, ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಯಲ್ಲಿಯೂ ಶೌಚಾಲಯ ವ್ಯವಸ್ಥೆ ಇರುವಂತೆ ಒತ್ತು ನೀಡಬೇಕಾಗಿದೆ ಎಂದು ತಾಪಂ ಇಒ ವಸಂತಕುಮಾರ್ ಅವರು ಹೇಳಿದರು. ಮಂಡ್ಯ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ‘ಸಂಪೂರ್ಣ ಸ್ವಚ್ಛತಾ ಅಂದೋಲನ’ ಕುರಿತು ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಈ ಉದ್ದೇಶ ಈಡೇರಲು ಹೆಚ್ಚಿನ ಜಾಗೃತೆಯಿಂದ ಕೆಲಸ ನಿರ್ವಹಿಸಬೇಕು. ಶೌಚಾಲಯ ಸೇವೆ ಹೊಂದಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಯೋಜನೆಗಳ ಮೂಲಕ ನೆರವನ್ನೂ ನೀಡುತ್ತಿದೆ ಎಂದು ಹೇಳಿದರು. ಗ್ರಾಮ ವ್ಯಾಪ್ತಿಯಲ್ಲಿ ಯಾವ ಕುಟುಂಬ ಶೌಚಾಲಯ ಹೊಂದಿಲ್ಲ ಎಂಬುದನ್ನು ಗುರುತಿಸಿ ಅವರಿಗೆ ಸೇವೆ ಒದಗಸಿಲು ಒತ್ತು ನೀಡಬೇಕು. ಗ್ರಾಮಸ್ಥರು ಕೂಡಾ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹೊಂದಲು ನೀಡುವಷ್ಟೇ ಆದ್ಯತೆಯನ್ನು ಶೌಚಾಲಯ ಹೊಂದಲು ನೀಡಬೇಕು ಎಂದರು.

ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ತಾಪಂ ಇಒ ವಸಂತಕುಮಾರ್, ಹೊಡಾಘಟ್ಟ ಗ್ರಾಪಂ ಅಧ್ಯಕ್ಷ ನಾಗಣ್ಣ, ಸಂತೆಕಸಲಗೆರೆ ಗ್ರಾಪಂ ಅಧ್ಯಕ್ಷೆ ಸುವರ್ಣಾವತಿ, ಸಹಾಯಕ ಲೆಕ್ಕಾಧಿಕಾರಿ ಚಂದ್ರಶೇಖರಯ್ಯ ಅವರು ವೇದಿಕೆಯಲ್ಲಿದ್ದರು. ವಿವಿಧ ಗ್ರಾಮ ಪಂಚಾಯಿತಿಗಳ ನೋಡಲ್ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.