ADVERTISEMENT

ಮಠದ ಮೇಲೆ ತೆರಿಗೆ ಇಲಾಖೆ ದಾಳಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:52 IST
Last Updated 19 ಜುಲೈ 2013, 6:52 IST

ಮಂಡ್ಯ: ಬೆಂಗಳೂರಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಗುರುವಾರ ಮಂಡ್ಯ ಹಾಗೂ ಮದ್ದೂರಿನಲ್ಲಿ ಒಕ್ಕಲಿಗ ಜನಾಂಗದ ಜನರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಕ್ಕಲಿಗ ವಿರೋಧಿ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಿಕ್ಕಾರ ಕೂಗಿದರು.

ಅರ್ಧಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.

ಎಳನೀರು ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಯು.ಎಸ್. ರವೀಗೌಡ, ಮುಖಂಡರಾದ ಕದಲೂರು ಶಶಿ, ಕಾಳೀರಯ್ಯ, ದೇವು, ಸಿದ್ದೇಗೌಡ, ಗಿರೀಶ್, ಕೂಳಗೆರೆ ಶೇಖರ್, ಎಚ್. ಶ್ರೀನಿವಾಸ್, ಸಂದೀಪ್, ನಾಗೇಶ್, ಅವಿನಂದನ್, ಕೆ.ಕೃಷ್ಣ, ಬವಾಳಿ ಸಿದ್ದೇಗೌಡ, ಚನ್ನಸಂದ್ರ ಚಂದು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಒಕ್ಕಲಿಗರ ಸಂಘ: ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಇಲ್ಲಿನ ಟಿಬಿ ವೃತ್ತದಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಸಿ.ಎಸ್. ಪುರುಷೋತ್ತಮ್, ಮಾಜಿ ಅಧ್ಯಕ್ಷ  ಎಂ. ರಾಮಚಂದ್ರು, ಸಂಚಾಲಕರಾದ ವಿ.ಟಿ. ರವಿಕುಮಾರ್, ವಿ. ಹರ್ಷ,   ಡಿ.ಪಿ. ಶಿವಪ್ಪ, ಸಿದ್ದೇಗೌಡ ಹೊಸಕೆರೆ ಕೃಷ್ಣ, ಜಯರಾಮು, ರಮೇಶ್,  ವಿ.ಸಿ. ಉಮಾಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇಂದು ಹೆದ್ದಾರಿ ತಡೆ: ಒಕ್ಕಲಿಗರ ವಿರೋಧಿ ಸರ್ಕಾರದ ವಿರುದ್ಧ ಶನಿವಾರ ಬೆಳಿಗ್ಗೆ 10ಗಂಟೆಗೆ ಟಿಬಿ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರ ಜನಾಂಗದ ಜನರು ಪಾಲ್ಗೊಳ್ಳಬೇಕೆಂದು ಎಳನೀರು ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.