ADVERTISEMENT

ಸೇವಾ ಮನೋಭಾವ ಬೆಳೆಸಿಕೊಳ್ಳಿ: ಶಾಂತಾ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 8:10 IST
Last Updated 20 ಆಗಸ್ಟ್ 2012, 8:10 IST

ಮಳವಳ್ಳಿ: ಕಾಯಕವೇ ಕೈಲಾಸ ಎಂಬಂತೆ ಎಲ್ಲರೂ ಅವರವರ ಆತ್ಮ ತೃಪ್ತಿಗೆ ಅನುಗುಣವಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಂಡ್ಯ ಉಪವಿಭಾಗದ ಉಪವಿಭಾಗಾಧಿಕಾರಿ ಶಾಂತ.ಎಲ್. ಹುಲ್ಮನಿ ತಿಳಿಸಿದರು.

ತಾಲ್ಲೂಕಿನ ಕುಂದೂರು- ತೆಂಕಹಳ್ಳಿ ಬೆಟ್ಟದ ರಸಸಿದ್ದೆಶ್ವರ ಮಠದಲ್ಲಿ ಭಾನುವಾರ ಮಹಾಂತೇಶ್ವರ ಜ್ಷಾನ ವಿಕಾಸ ಸಮಿತಿ ವತಿಯಿಂದ ಆಯೋಜಿಸಿದ್ದ `ಸಾಮಾಜಿಕ ಜೀವನದಲ್ಲಿ ಆಧ್ಯಾತ್ಮಿಕ ಬದುಕು~ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಾಮರಾಜನಗರದ ಜೆಎಸ್‌ಎಸ್ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಮಹೇಶ್ವರಿ ಮಾತನಾಡಿ, ಬಸವಣ್ಣ, ಅಲ್ಲಮ್ಮಪ್ರಭು, ಜೇಡರ ದಾಸಿಮಯ್ಯ, ಅಕ್ಕಮಹಾದೇವಿ ಸೇರಿದಂತೆ ವಚನಕಾರರ ವಚನಗಳನ್ನು ಓದಿ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ನಡೆ-ನುಡಿ, ಆಚಾರ-ವಿಚಾರ ಎಂಬ ತತ್ವಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶಾಂತ.ಎಲ್. ಹುಲ್ಮನಿ ಹಾಗೂ ಅವರ ಪತಿ ಶಿವಕುಮಾರ್ ದಂಪತಿಯನ್ನು ಸನ್ಮಾನಿಸ ಲಾಯಿತು. ಗುರು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೈಸೂರು ಬೆಮೆಲ್ ಉತ್ತರ ಕರ್ನಾಟಕ ಬಳಗದ ಮಾಜಿ ಉಪಾಧ್ಯಕ್ಷ ವೀರಪ್ಪಆದಿ, ಪುಟ್ಟ ಸಿದ್ದಯ್ಯ, ವೀರಶೈವ ಯುವ ಬಳಗದ ಅಧ್ಯಕ್ಷ ಬಿ.ಎನ್.ರಮೇಶ್, ಬಬ್ರು ವಾಹನ, ನೆಲ್ಲಿಗೆರೆ ಸುಬ್ಬಣ್ಣ ಸಿ.ಎಂ.ಪುಟ್ಟಬುದ್ದಿ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.