ADVERTISEMENT

‘ಸ್ವಾಭಿಮಾನಿ ಕಾರ್ಯಕರ್ತರು ಜೆಡಿಎಸ್‌ನಿಂದ ಹೊರಬನ್ನಿ’

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 10:36 IST
Last Updated 31 ಮಾರ್ಚ್ 2018, 10:36 IST
ಭಾರತೀನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ. ರಾಮಕೃಷ್ಣ ಮಾತನಾಡಿದರು
ಭಾರತೀನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ. ರಾಮಕೃಷ್ಣ ಮಾತನಾಡಿದರು   

ಭಾರತೀನಗರ: ‘ಜೆಡಿಎಸ್‌ನಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರಿಂದ ಕಡೆಗಣಿಸಲ್ಪಿಟ್ಟಿರುವ ಕಾರ್ಯಕರ್ತರು ಪಕ್ಷ ಬಿಟ್ಟು ಹೊರಬಂದು ಕಾಂಗ್ರೆಸ್ ಜತೆಗೆ ಕೈಜೋಡಿಸಬೇಕು’ ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಬಿ.ರಾಮಕೃಷ್ಣ ಹೇಳಿದರು.

ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಶಾಸಕರ ಚಿತಾವಣೆಯಿಂದ ಅನೇಕ ಕಾರ್ಯಕರ್ತರು ಮೂಲೆಗುಂಪಾಗಿದ್ದಾರೆ. ಹಲವರ ಭವಿಷ್ಯ ಅತಂತ್ರವಾಗಿದೆ. ಆ ಎಲ್ಲರೂ ಸ್ವಾಭಿಮಾನಕ್ಕಾಗಿ ಹೊರಬರಬೇಕು’ ಎಂದು ಸಲಹೆ ಮಾಡಿದರು.

ADVERTISEMENT

ಕಾಂಗ್ರೆಸ್‌ ಪಕ್ಷ ನಿಷ್ಟಾವಂತ ನಾಯಕರನ್ನು ಮರೆಯುವುದಿಲ್ಲ. ಸೂಕ್ತ ಸ್ಥಾನಮಾನ ನೀಡಿ ಗೌರವಿಸುತ್ತದೆ. ಹಲವರು ಸಿದ್ದರಾಮಯ್ಯ ನಾಯಕತ್ವ ಮೆಚ್ಚಿ ಕಾಂಗ್ರೆಸ್‌ ಬೆಂಬಲಿಸುತ್ತಿದ್ದಾರೆ. ಇದು ರಾಜಕೀಯ ಮನ್ವಂತರವಾಗಿದೆ’ ಎಂದು ಬಣ್ಣಿಸಿದರು.

ಷವಿಧಾನ ಪರಿಷತ್‌ ಮಾಜಿ ಸದಸ್ಯ ಮಧು ಜಿ. ಮಾದೇಗೌಡ ಅವರು, ‘ಕಾಂಗ್ರೆಸ್‌ನಲ್ಲಿ ಭಿನ್ನಮತವಿಲ್ಲ. ಕಾರ್ಯಕರ್ತರು ವದಂತಿಗೆ ಕಿವಿಗೊಡಬೇಡಿ. ಬಿ. ರಾಮಕೃಷ್ಣ ನಾಯಕತ್ವದಲ್ಲಿ ಕಾಂಗ್ರೆಸ್‌ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ’ ಎಂದರು.

ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಕಾಂಗ್ರೆಸ್‌ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂ.ಸಿ. ಬಸವರಾಜು, ಅಜ್ಜಹಳ್ಳಿ ರಾಮಕೃಷ್ಣ, ಪಣ್ಣೆದೊಡ್ಡಿ ವಿಜಯೇಂದ್ರ, ವಿ.ಕೆ. ಜಗದೀಶ್‌, ಬಿ.ಎಂ. ನಂಜೇಗೌಡ, ಸುರೇಶ್‌ ಕಂಠಿ, ಎ.ಎಸ್‌. ರಾಜೀವ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.