ADVERTISEMENT

ಮಾದಾಪುರ ಸೊಸೈಟಿಗೆ 11 ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:49 IST
Last Updated 12 ಮೇ 2025, 14:49 IST
ಕಿಕ್ಕೇರಿ ಹೋಬಳಿಯ ಮಾದಾಪುರದಲ್ಲಿ ಭಾನುವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕರೊಂದಿಗೆ ಅಭಿಮಾನಿಗಳು ಸಂಭ್ರಮ ಹಂಚಿಕೊಂಡರು
ಕಿಕ್ಕೇರಿ ಹೋಬಳಿಯ ಮಾದಾಪುರದಲ್ಲಿ ಭಾನುವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ವಿಜೇತರಾದ ನಿರ್ದೇಶಕರೊಂದಿಗೆ ಅಭಿಮಾನಿಗಳು ಸಂಭ್ರಮ ಹಂಚಿಕೊಂಡರು   

ಕಿಕ್ಕೇರಿ: ಹೋಬಳಿಯ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿ‌ಎಸ್-ಬಿಜೆಪಿ ಮೈತ್ರಿ ಪಕ್ಷದ 11 ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಸಾಮಾನ್ಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾದಾಪುರ ಎಂ.ಕೆ. ರಾಮಕೃಷ್ಣೇಗೌಡ ವಿಜಯಿಯಾಗಿದ್ದಾರೆ. ಚುನಾವಣಾ ಅಧಿಕಾರಿಗಳಾಗಿ ತಾಲ್ಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್ ಕಾರ್ಯನಿರ್ವಹಿಸಿದರು.

ಸಾಲಗಾರರಲ್ಲದ ಕ್ಷೇತ್ರದಿಂದ ಕೋಟಹಳ್ಳಿ ಶ್ರೀನಿವಾಸ್, ಸಾಮಾನ್ಯ ಕ್ಷೇತ್ರದಿಂದ ಅಣ್ಣೆಗೌಡ, ಎಂ.ಆರ್..ಕೃಷ್ಣೇಗೌಡ, ಭೈರೇಶ್, ಶಿವೇಗೌಡ, ಹಿಂದುಳಿದ ವರ್ಗ(ಬಿ) ಕ್ಷೇತ್ರದಿಂದ ಸಿ.ಕೆ. ಬಸವರಾಜು, ಕೆ. ನಂಜೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಟಿ. ಪವಿತ್ರ, ಎಂ.ಕೆ ಸುಮಾ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಲೋಕೇಶ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಚಲುವರಾಜನಾಯ್ಕ ಆಯ್ಕೆಯಾಗಿದ್ದಾರೆ.

ADVERTISEMENT

ಅಭಿಮಾನಿಗಳು ಪಟಾಕಿ ಸಿಡಿಸಿ, ಪುಷ್ಪಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ಜಿ.ಟಿ. ಪ್ರಸನ್ನ, ರಾಜಣ್ಣ, ಅಜ್ಜೇಗೌಡ, ಚಂದ್ರು, ಗಿರೀಶ್, ಕಾಳೇಗೌಡ, ಹೊನ್ನೇಗೌಡ, ಪ್ರಕಾಶ್, ತೋಪೇಗೌಡ, ಮುರುಳೀಧರ್, ಜವರೇಗೌಡ, ಮಂಜುನಾಥ್, ರಘುರಾಂ ಮತ್ತಿತರರಿದ್ದರು.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.