ADVERTISEMENT

22 ಸಾವಿರ ಮೌಲ್ಯದ ನೋಟ್‌ಬುಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 4:15 IST
Last Updated 23 ಜೂನ್ 2012, 4:15 IST

ಮದ್ದೂರು: ಖಾಸಗಿ ಕಾನ್ವೆಂಟ್‌ಗಳ ಹಾವಳಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳು ಇಂದು ಮುಚ್ಚುವ ಸ್ಥಿತಿ ತಲುಪಿವೆ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ದಾಸೇಗೌಡ ಶುಕ್ರವಾರ ವಿಷಾದಿಸಿದರು.

ತಾಲ್ಲೂಕಿನ ಕೆಸ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುಕ್ರವಾರ ಏರ್ಪಡಿಸಿದ್ದ ಉಚಿತ ನೋಟ್‌ಬುಕ್ ಹಾಗೂ ಲೇಖನಿ ಸಾಮಗ್ರಿಗಳ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ನುರಿತ ಶಿಕ್ಷಕರಿದ್ದು, ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಸೇರಿದಂತೆ ಎಲ್ಲ ಉಚಿತ ಸವಲತ್ತುಗಳನ್ನು ನೀಡಲಾಗುತ್ತಿದೆ. ಪೋಷಕರು ಖಾಸಗಿ ಕಾನ್ವೆಂಟ್ ವ್ಯಾಮೋಹ ತ್ಯಜಿಸಿ ಸರ್ಕಾರಿ ಶಾಲೆಗಳೆಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಬಿಆರ್‌ಪಿ ಜ್ಞಾನಕುಮಾರಿ ಮಾತನಾಡಿ, ವಿದ್ಯೆ ಯಾರೂ ಕದಿಯದ ಅಮೂಲ್ಯ ಸಂಪತ್ತಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ವಿನಂತಿಸಿದರು.  ಮುಖಂಡರಾದ ಕೆ.ಟಿ.ರಾಮಣ್ಣ, ದಾಸೇಗೌಡ, ಪಾಂಡುರಂಗ ಇತರರು ಶಾಲೆಯ 180 ವಿದ್ಯಾರ್ಥಿಗಳಿಗೆ 22 ಸಾವಿರ ರೂಪಾಯಿ ಮೌಲ್ಯದ ನೋಟ್‌ಬುಕ್ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿದರು.
 
ಎಸ್‌ಡಿಎಂಸಿ ಅಧ್ಯಕ್ಷೆ ತ್ರಿವೇಣಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ವಿ.ಉಮೇಶ್, ಲಕ್ಷ್ಮಿಜಗದೀಶ್, ಸಿಆರ್‌ಪಿ ರಮೇಶಾಚಾರಿ, ಹನುಮಂತರಾವ್, ಮುಖ್ಯ ಶಿಕ್ಷಕಿ ಶಂಕರಮ್ಮ, ಶಿಕ್ಷಕರಾದ ಸುರೇಶ್, ಗಿರೀಶ್, ಜ್ಯೋತಿ, ಕಿರಣ್, ಭಾಗ್ಯಮ್ಮ, ಅಂತೋಣಿಯಮ್ಮ ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.