ADVERTISEMENT

ನಾಗಮಂಗಲ: ವೈಭವದಿಂದ ಜರುಗಿದ ಚಂದ್ರಮೌಳೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 21:16 IST
Last Updated 25 ಫೆಬ್ರುವರಿ 2026, 21:16 IST
<div class="paragraphs"><p>ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವ ಬುಧವಾರ ವೈಭವದಿಂದ ನಡೆಯಿತು &nbsp;ಪ್ರಜಾವಾಣಿ ಚಿತ್ರ</p></div>

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವ ಬುಧವಾರ ವೈಭವದಿಂದ ನಡೆಯಿತು  ಪ್ರಜಾವಾಣಿ ಚಿತ್ರ

   

ನಾಗಮಂಗಲ: ತಾಲ್ಲೂಕಿನ ಪುರಾಣ ಪ್ರಸಿದ್ಧ ಆದಿಚುಂಚನಗಿರಿ ಕ್ಷೇತ್ರದ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಬುಧವಾರ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವ ‌ವೈಭವದಿಂದ ನಡೆಯಿತು. 

ಆದಿಚುಂಚನಗಿರಿಯಲ್ಲಿ ಮುಂಜಾನೆ ಕಾಲಭೈರವೇಶ್ವರ ಹಾಗೂ ಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ರಾತ್ರಿ ಸರ್ವಾಲಂಕೃತಗೊಂಡ ಚಂದ್ರಮೌಳೇಶ್ವರ ಸ್ವಾಮಿಯ ರಥಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ರಥ ಬೀದಿಯಲ್ಲಿ ‌ಉತ್ಸವ ಶ್ರದ್ಧಾ ಭಕ್ತಿಗಳೊಂದಿಗೆ ಸಾಗಿ ಭಕ್ತರ ಕಣ್ಮನ ಸೆಳೆಯಿತು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಸೇರಿ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.