ADVERTISEMENT

ಮೇಲುಕೋಟೆ ಬೆಟ್ಟದಲ್ಲಿ ‘ತಂಗಲೆ ನಾಮ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 15:44 IST
Last Updated 26 ಜನವರಿ 2024, 15:44 IST
ಮೇಲುಕೋಟೆ ಯೋಗನರಸಿಂಹ ಬೆಟ್ಟದ ಮೇಲಿನ ಚಿಕ್ಕ ಗೋಪುರದಲ್ಲಿ ತಂಗಲೆ ನಾಮ ಬರೆದಿರುವುದು
ಮೇಲುಕೋಟೆ ಯೋಗನರಸಿಂಹ ಬೆಟ್ಟದ ಮೇಲಿನ ಚಿಕ್ಕ ಗೋಪುರದಲ್ಲಿ ತಂಗಲೆ ನಾಮ ಬರೆದಿರುವುದು   

ಮೇಲುಕೋಟೆ: ಶ್ರೀಕ್ಷೇತ್ರ ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಚಿಕ್ಕ ಗೋಪುರದಲ್ಲಿ ಶುಕ್ರವಾರ ‘ವಡಗಲೆ ನಾಮ’ ತೆಗೆದು ‘ತೆಂಗಲೆ ನಾಮ‘ ಹಾಕಲಾಯಿತು.

‘ನಾಮ ಬದಲಾವಣೆ ಕುರಿತು 1973ರಿಂದಲೂ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ವಡಗಲೆ ನಾಮದ ಬದಲು ತೆಂಗಲೆ ನಾಮ ಹಾಕುವಂತೆ ಆದೇಶವಾಗಿರುವ ಕಾರಣ ಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಾಮ ಬದಲಾವಣೆ ಮಾಡಲಾಗಿದೆ’ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದರು.

‘1970ರಲ್ಲಿ ಚಿಕ್ಕ ಗೋಪುರ ನಿರ್ಮಾಣದ ವೇಳೆ ತೆಂಗಲೆ ನಾಮ  ಬದಲಾವಣೆ ಮಾಡಿ ವಡಗಲೆ ನಾಮ ಬರೆಯಲಾಗಿತ್ತು. ಸ್ಥಳೀಯ ಸಂಪ್ರದಾಯದಂತೆ ತೆಂಗಲೆ ನಾಮ ತೆಗೆಯುವಂತೆ ಹೈಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತೆಂಗಲೆ ನಾಮ ಬರೆಯಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.