ADVERTISEMENT

ಮಂಡ್ಯ: ಹೆಣ್ಣು ಮಗುವಿಗೆ ಜನ್ಮನೀಡಿ ಕೋವಿಡ್‌ನಿಂದ ಮೃತಪಟ್ಟ ಉಪನ್ಯಾಸಕಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 12:11 IST
Last Updated 25 ಮೇ 2021, 12:11 IST
ಡಿ.ಆರ್‌. ಗುಣಶ್ರೀ
ಡಿ.ಆರ್‌. ಗುಣಶ್ರೀ   

ಭಾರತೀನಗರ: ಇಲ್ಲಿನ ಅರೆತಿಪ್ಪೂರು ಗ್ರಾಮದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿ, ಕೋವಿಡ್‌ ಸೋಂಕಿನಿಂದ ಉಪನ್ಯಾಸಕಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.

ಅರೆತಿಪ್ಪೂರು ಗ್ರಾಮದ ಟಿ.ಪಿ. ಮನೋಹರಗೌಡ ಅವರ ಪತ್ನಿ ಡಿ.ಆರ್‌. ಗುಣಶ್ರೀ (35) ಮೃತಪಟ್ಟ ಉಪನ್ಯಾಸಕಿ.

ಮೂಲತಃ ಬೊಮ್ಮನದೊಡ್ಡಿ ಗ್ರಾಮದವರಾದ ಇವರು ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿ ಬೇಸಾಯ ಮಾಡುತ್ತಿದ್ದಾರೆ.

ADVERTISEMENT

ಮದುವೆಯಾಗಿ 4 ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಏಳೂವರೆ ತಿಂಗಳ ಗರ್ಭಿಣಿಯಾಗಿದ್ದ ಗುಣಶ್ರೀ ಅವರಿಗೆ ಈಚೆಗೆ ಕೋವಿಡ್‌ ಸೋಂಕು ತಗುಲಿತ್ತು. ಉಸಿರಾಟದ ಸಮಸ್ಯೆಯಿಂದಾಗಿ ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

‌ತೀವ್ರ ಶ್ವಾಸಕೋಶ ಸೋಂಕಿನ ಪರಿಣಾಮ ಭಾನುವಾರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗು ಹೊರತೆಗೆದಿದ್ದರು. ಚಿಕಿತ್ಸೆಗೆ ಸ್ಪಂದಿಸದ ಅವರು ಸೋಮವಾರ ರಾತ್ರಿ ಮೃತರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ ಅರೆತಿಪ್ಪೂರು ಗ್ರಾಮದಲ್ಲಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.