ADVERTISEMENT

ಜ.14,15ರಂದು ಹಾವೇರಿಯಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:13 IST
Last Updated 23 ಡಿಸೆಂಬರ್ 2025, 6:13 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಡ್ಯ: ಹಾವೇರಿ ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಅಂಬಿಗರ ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥಿ ಮಹಾ ರಥೋತ್ಸವವು ಜ.14, 15 ರಂದು ನಡೆಯಲಿದೆ ಎಂದು ಗುರುಪೀಠದ ಶಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಜ.14 ರಂದು ಬೆಳಿಗ್ಗೆ 6 ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, ಐಕ್ಯಮಂಟಪ ಪೂಜೆ, ಸಾಮೂಹಿಕ ರಕ್ತದಾನ, ಸರಳ ವಿವಾಹ, ಪ್ರತಿಭಾ ಪುರಸ್ಕಾರ, ಕಂಠಪಾಠ ಸ್ಪರ್ಧೆ,‌ ಗಂಗಾರತಿ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ಲಿಂಗೈಕ್ಯ ಶಾಂತಮುನಿ ಸ್ವಾಮೀಜಿ ಹತ್ತನೇ ಸ್ಮರಣೋತ್ಸವ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ADVERTISEMENT

ಜ.15 ರಂದು ಬೆಳಿಗ್ಗೆ 8 ಗಂಟೆಗೆ ಧರ್ಮ ಧ್ವಜಾರೋಹಣ, ಧರ್ಮಸಭೆ, ಚೌಡಯ್ಯನವರ ಶಿಲಾಮಂಟಪ, ಅಡಿ ಎತ್ತರದ ಕಂಚಿನ ಪುತ್ಥಳಿ ಲೋಕಾರ್ಪಣೆ, ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ, ಅಂಬಿಗರ ಚೌಡಯ್ಯಅವರ ಜಯಂತ್ಯುತ್ಸವ, ಶಾಂತಭೀಷ್ಮಚೌಡಯ್ಯ ಸ್ವಾಮೀಜಿಗಳ ಪೀಠಾರೋಹಣ ದಶಮಾನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ವಿವಾಹದ ಕುರಿತು ಆಸಕ್ತರು ಜ.1 ರೊಳಗೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ಜ.5 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.

ಮಠದ ನಿರ್ದೇಶಕ ಬಸವರಾಜ ಸಪ್ಪನಗೋಳ, ಗಂಗಾಮತಸ್ತ(ಬೆಸ್ತರ್) ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರಮೇಶ್, ಗಂಗಾಮತಸ್ತರ ಸರ್ಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ಕೃಷ್ಣಯ್ಯ, ಮುಖಂಡರಾದ ವೀರಣ್ಣ, ಎಂ.ಚಂದ್ರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.