ADVERTISEMENT

ರಾಜ್ಯ ಸರ್ಕಾರದಿಂದ ಮದ್ದೂರಿಗೆ ಮತ್ತೊಂದು ಅನುದಾನ

ಬೈರನ್ ನಾಲಾ ಅಧುನೀಕರಣ ಕಾಮಗಾರಿಗೆ ₹49.50 ಕೋಟಿ ಆಡಳಿತಾತ್ಮಕ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 3:09 IST
Last Updated 9 ಆಗಸ್ಟ್ 2025, 3:09 IST
ದಶಕಗಳ ಹಿಂದಿನಿಂದಲೂ ಗಿಡ ಗೆಂಟೆಗಳು ಬೆಳೆದು ಹೂಳು ತುಂಬಿದ್ದ ಬೈರನ್ ಹಾಗೂ ವೈದ್ಯನಾಥಪುರ ನಾಲೆಗಳನ್ನು ಕಳೆದ ತಿಂಗಳು ಶಾಸಕ ಕೆ.ಎಂ.ಉದಯ್ ಸ್ಥಳೀಯ ರೈತರೊಂದಿಗೆ ಪರಿಶೀಲಿಸಿದರು
ದಶಕಗಳ ಹಿಂದಿನಿಂದಲೂ ಗಿಡ ಗೆಂಟೆಗಳು ಬೆಳೆದು ಹೂಳು ತುಂಬಿದ್ದ ಬೈರನ್ ಹಾಗೂ ವೈದ್ಯನಾಥಪುರ ನಾಲೆಗಳನ್ನು ಕಳೆದ ತಿಂಗಳು ಶಾಸಕ ಕೆ.ಎಂ.ಉದಯ್ ಸ್ಥಳೀಯ ರೈತರೊಂದಿಗೆ ಪರಿಶೀಲಿಸಿದರು   

ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಮತ್ತೊಮ್ಮೆ ರಾಜ್ಯ ಸರ್ಕಾರದಿಂದ ದೊಡ್ಡ ಮೊತ್ತದ ಅನುದಾನ ಸಿಕ್ಕಿದೆ.

ಮದ್ದೂರಮ್ಮನವರ ಕೆರೆಯ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಬೈರನ್ ನಾಲಾ ಹಾಗೂ ವ್ಯದ್ಯನಾಥಪುರ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ಕೈಗೊಳ್ಳಲು ಗುರುವಾರ ₹49.50 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿ ರಾಜ್ಯ ಸಚಿವ ಸಂಪುಟ ಘೋಷಿಸಿದೆ.

10 ತಿಂಗಳ ಹಿಂದೆ ಇದೇ ಮದ್ದೂರಮ್ಮನವರ ಕೆರೆ ಅಚ್ಚುಕಟ್ಟು ವ್ಯಾಪ್ತಿಗೆ ಬರುವ 20ಕ್ಕೂ ಹೆಚ್ಚು ಹಳ್ಳಿಗಳ ರೈತ ಜಮೀನುಗಳಿಗೆ ನೀರು ಪೂರೈಕೆ ಮಾಡುವ ಕೆಮ್ಮಣ್ಣು ನಾಲಾ ಆಧುನೀಕರಣ ಕಾಮಗಾರಿಗೆ ₹90 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ನೀರಾವರಿ ಇಲಾಖೆಯ ಮೂಲಕ ನೀಡಿತ್ತು ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಕಾಮಗಾರಿಯು ನಡೆಯುತ್ತಿದೆ.

ADVERTISEMENT

‘ಮದ್ದೂರಮ್ಮನವರ ಕೆರೆ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಬೈರನ್ ಹಾಗೂ ವೈದ್ಯನಾಥಪುರ ನಾಲೆಗಳ ಆಧುನೀಕರಣ ಕಾಮಗಾರಿಗೂ ಅನುದಾನ ನೀಡುವಂತೆ ಈ ಮೊದಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಗೆ ಪ್ರಸ್ತಾವ ಸಲ್ಲಿಸಿ ಕೋರಲಾಗಿತ್ತು. ಅಂತೆಯೇ ಅದನ್ನು ಪುರಸ್ಕರಿಸಿ ಈಗ ಅನುದಾನವನ್ನು ರಾಜ್ಯ ಸರ್ಕಾರವು ನೀಡಿದೆ. ಇದರಿಂದ ನೂರಾರು ರೈತರಿಗೆ ಅನುಕೂಲವಾಗಲಿದೆ’ ಎಂದು ಶಾಸಕ ಕೆ.ಎಂ ಉದಯ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.