ADVERTISEMENT

ಅಪ್ಪನಹಳ್ಳಿ: ಚರಂಡಿ ಸ್ವಚ್ಛತೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 12:38 IST
Last Updated 28 ಏಪ್ರಿಲ್ 2025, 12:38 IST
ಸಂತೇಬಾಚಹಳ್ಳಿ ಹೋಬಳಿಯ ಅಪ್ಪನಹಳ್ಳಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ
ಸಂತೇಬಾಚಹಳ್ಳಿ ಹೋಬಳಿಯ ಅಪ್ಪನಹಳ್ಳಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ   

ಸಂತೇಬಾಚಹಳ್ಳಿ: ಅಪ್ಪನಹಳ್ಳಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ, ಕೊಳಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ.

ಗ್ರಾಮದ ಗೌರಮ್ಮ ಮಾತನಾಡಿ, ‘ವೀರಭದ್ರ ಸ್ವಾಮಿ ರಂಗದ ಬೀದಿಯ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಸ್ವಚ್ಛಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾ.ಪಂ. ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸಭೆ ಹಾಗೂ ವಾರ್ಷಿಕ ಸಭೆಗಳಲ್ಲಿ ತಿಳಿಸಿದರೂ ಬಗೆಹರಿಸಿಲ್ಲ. ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನಟರಾಜು, ನಂಜಮಾಣಿ, ರಘು, ಬಾಲಕೃಷ್ಣ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.