ADVERTISEMENT

ಕಿಕ್ಕೇರಿ: ಕಿಡಿಗೇಡಿಗಳಿಂದ ಬಾಳೆ ಅಡಿಕೆ ಗಿಡ ಧ್ವಂಸ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:47 IST
Last Updated 29 ಜನವರಿ 2026, 6:47 IST
ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದ ರೈತ ರವಿ ಎಂಬುವರ ಬಾಳೆ, ಅಡಿಕೆ ಗಿಡವನ್ನು ಕಿಡಿಗೇಡಿಗಳು ಮಂಗಳವಾರ ಕತ್ತರಿಸಿ ಹಾಕಿರುವುದು
ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದ ರೈತ ರವಿ ಎಂಬುವರ ಬಾಳೆ, ಅಡಿಕೆ ಗಿಡವನ್ನು ಕಿಡಿಗೇಡಿಗಳು ಮಂಗಳವಾರ ಕತ್ತರಿಸಿ ಹಾಕಿರುವುದು   

ಕಿಕ್ಕೇರಿ: ಹೋಬಳಿಯ ಸೊಳ್ಳೇಪುರ ಗ್ರಾಮದ ರೈತ ರವಿ ಎಂಬುವರ ಬಾಳೆ, ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ.

ಈ ಕೃತ್ಯಕ್ಕೆ ವೈಯಕ್ತಿಕ ದ್ವೇಷವೇ ಕಾರಣ ಎನ್ನಲಾಗಿದೆ. ಮಂಗಳವಾರ ರಾತ್ರಿ ಕಿಡಿಗೇಡಿಗಳು ರವಿ ತೋಟದಲ್ಲಿದ್ದ ಫಲ ಬಿಡುತ್ತಿದ್ದ 500 ಬಾಳೆಗಿಡ ಹಾಗೂ ಅಡಿಕೆ ಗಿಡಗಳನ್ನು ಕಡಿದು ಧ್ವಂಸ ಮಾಡಿದ್ದಾರೆ. ಜಮೀನಿಗೆ ನೀರು ಹಾಯಿಸಲು ಬಳಸಿಕೊಳ್ಳುತ್ತಿದ್ದ ಗೇಟ್ ವಾಲ್ವ್‌ಗಳನ್ನು ಕೂಡ ಹಾಳು ಮಾಡಿದ್ದಾರೆ.

ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಲು ನಷ್ಟಕ್ಕೊಳಗಾದ ರೈತ ರವಿ ಕಿಕ್ಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.