ADVERTISEMENT

ಹಲಗೂರು | ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಇಂದು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:06 IST
Last Updated 8 ಫೆಬ್ರುವರಿ 2026, 4:06 IST
ಹಲಗೂರು ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಬಸವೇಶ್ವರ ದೇವಾಲಯ
ಹಲಗೂರು ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಬಸವೇಶ್ವರ ದೇವಾಲಯ   

ಹಲಗೂರು: ಸಮೀಪದ ಹುಲ್ಲಾಗಾಲ ಗ್ರಾಮದಲ್ಲಿ ಬಸವೇಶ್ವರ ವಿಮಾನ ಗೋಪುರ ಪುನರ್ ಪ್ರತಿಷ್ಠಾಪನೆ ಮತ್ತು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮ ಫೆ.8 ಮತ್ತು 9ರಂದು ಎರಡು ದಿನ ನಡೆಯಲಿದೆ.

ಫೆ.8ರಂದು ಸಂಜೆ 6ಗಂಟೆಗೆ ಪುಣ್ಯಾಹ, ಗಣಪತಿ ಪೂಜೆ, ಹೋಮ ನಾಂದಿ, ಅಂಕುರಾರ್ಪಣ, ರಕ್ಷಾ ಸೂತ್ರಧಾರಣ, ರಾಘೋಪ್ನ, ಹೋಮ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಂತರ ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 7 ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ.

ಫೆ.9 ರಂದು ಬೆಳಿಗ್ಗೆ 6.30ಕ್ಕೆ ಗಂಗೆ ತಡಿಯಿಂದ ಗಂಗೆ ತರುವುದು. ಶ್ರೀ ಬಸವೇಶ್ವರ ಗೋಪುರ ಕಳಸ ಪೂಜಾ ಕಾರ್ಯಕ್ರಮ, ನವಗ್ರಹ ಹೋಮ, ಮಹಾ ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.

ADVERTISEMENT

ಬೆಳಿಗ್ಗೆ 8 ಗಂಟೆಗೆ ಶಿವಾರ ಉಮೇಶ್ ಮತ್ತು ತಂಡದಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ, ಅಂತರವಳ್ಳಿ ಸಿದ್ದೇಶ್ವರ ಸ್ವಾಮಿ ಬಸಪ್ಪ, ದೊಡ್ಡಚೆನ್ನೀಪುರ ಮಲೆ ಮಹದೇಶ್ವರ ಸ್ವಾಮಿ ಬಸಪ್ಪ, ನಡುಮಾರ್ಗದ ಬಸವೇಶ್ವರ ಸ್ವಾಮಿ, ಬಸಪ್ಪ ದೇವರ ಮೆರವಣಿಗೆ ನಡೆಯಲಿದೆ.

ತುಮಕೂರು ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮಿ, ಡಿ.ಹಲಸಹಳ್ಳಿ ಗವಿಮಠದ ಷಡಕ್ಷರಿಸ್ವಾಮಿ, ಹಂಗ್ರಾಪುರ ಮಠದ ಬಸವಲಿಂಗ ದೇಶಿಕೇಂದ್ರ ಸ್ವಾಮಿ, ದಬ್ಬಹಳ್ಳಿ ಗುರುಮಠದ ಚನ್ನವೀರಣ್ಣಾರಾಧ್ಯ ಸ್ವಾಮಿ, ಅಗಸನಪುರ ಗುರುಮಠದ ಚಂದ್ರಶೇಖರ್ ಆರಾಧ್ಯ ಅವರು ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.

ಅಂತರವಳ್ಳಿ, ಹುಲ್ಲಹಳ್ಳಿ, ದಡಮಹಳ್ಳಿ, ಹುಸ್ಕೂರು, ಹುಚ್ಚೇಗೌಡನದೊಡ್ಡಿ, ಚೆನ್ನೀಪುರ, ಬಾಣಗಹಳ್ಳಿ ಸೇರಿದಂತೆ ಹಲ್ಲಾಗಾಲ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.