
ಪ್ರಜಾವಾಣಿ ವಾರ್ತೆ
ಕಿಕ್ಕೇರಿ: ಮೈಸೂರಿನ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿನಿ, ಹೋಬಳಿಯ ಮಾದಾಪುರ ಗ್ರಾಮದ ಎಂ.ವೈ. ಹರ್ಷಿತಾ ಬಿ.ಇಡಿ. ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ (ಶೇ. 97.9) ಗಳಿಸಿದ್ದಾರೆ.
ಯತಿರಾಜು ಪುಷ್ಪಲತಾ ದಂಪತಿ ಪುತ್ರಿಯಾದ ಇವರು 2 ಚಿನ್ನದ ಪದಕ, ಎರಡು ನಗದು ಪುರಸ್ಕಾರಗಳು ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ ಬಿಎಸ್ಸಿ ಪದವಿ ಮುಗಿಸಿಕೊಂಡು ಬಿ.ಇಡಿ. ವ್ಯಾಸಂಗ ಮಾಡಿದ್ದಾರೆ. ರೈತ ಕುಟುಂಬದ ಮಗಳಾಗಿರುವ ಇವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.