ADVERTISEMENT

ಗಣಂಗೂರು ಟೋಲ್‌ ಬಳಿ ಸಾಲುಗಟ್ಟಿದ ವಾಹನಗಳು; ಪರದಾಡಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 5:37 IST
Last Updated 27 ಡಿಸೆಂಬರ್ 2025, 5:37 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂಉರ ಬಳಿಯ ಟೋಲ್‌ ಬಳಿ, ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಗುರುವಾರ ವಾಹನಗಳು ಸಾಲುಗಟ್ಟಿ ನಿಂತಿದ್ದವು</p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂಉರ ಬಳಿಯ ಟೋಲ್‌ ಬಳಿ, ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಗುರುವಾರ ವಾಹನಗಳು ಸಾಲುಗಟ್ಟಿ ನಿಂತಿದ್ದವು

   

ಶ್ರೀರಂಗಪಟ್ಟಣ: ತಾಲ್ಲೂಕಿನ ಗಣಂಗೂರು ಬಳಿಯ ಟೋಲ್‌ ಬಳಿ, ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಗುರುವಾರ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಟೋನ್‌ನಿಂದ ಒಂದು ಪರ್ಲಾಂಗು ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಬೆಳಿಗ್ಗೆಯಿಂದ ಸಂಜೆವರೆಗೂ ಮೇಲಿಂದ ಮೇಲೆ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಒಂದೊಂದು ವಾಹನ ಟೋಲ್ ದಾಟಲು 10ರಿಂದ 15 ನಿಮಿಷ ಹಿಡಿಯಿತು. ಇದರಿಂದ ಪ್ರಯಾಣಿಕರು ಪರದಾಡಿದರು.

ADVERTISEMENT

‘ಟೋಲ್‌ನಲ್ಲಿ ಬರುವ ಬದಲು ಸರ್ವೀಸ್ ರಸ್ತೆಯಲ್ಲಿ ಬಂದಿದ್ದರೆ ಬೇಗ ಮೈಸೂರು ತಲುಪಬಹುದಿತ್ತು’ ಎಂದು ಪ್ರಯಾಣಿಕರೊಬ್ಬರು ಹೇಳಿದರು.

‘ಕ್ರಿಸ್‌ಮಸ್‌ ನಿಮಿತ್ತ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಗುರುವಾರ ಹೆಚ್ಚಿನ ವಾಹನಗಳು ಸಂಚರಿಸಿದವು. ಬೆಳಿಗ್ಗೆ 10 ಗಂಟೆಯ ನಂತರ ವಾಹನ ದಟ್ಟಣೆ ಹೆಚ್ಚಾಯಿತು. ಹಾಗಾಗಿ ಟೋಲ್‌ ದಾಟಲು ತುಸು ತಡವಾಗುತ್ತಿತ್ತು. ಮೈಸೂರಿನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ವಾಹನಗಳು ಸುಗಮವಾಗಿ ಸಂಚರಿಸಿದವು’ ಎಂದು ಟೋಲ್ ಸಿಬ್ಬಂದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.