ಬೆಳಕವಾಡಿ: ಮಳವಳ್ಳಿ ಬಿಜೆಪಿ ಮಂಡಲದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದ ಅಂಗವಾಗಿ ಸರಗೂರು ಹ್ಯಾಂಡ್ ಪೋಸ್ಟ್ ರಾಮವ್ವ ಮೂಗಪ್ಪ ದೇವಸ್ಥಾನದ ಆವರಣದಲ್ಲಿ ಸೋಮವಾರ ಸೇವಾ ಪಾಕ್ಷಿಕ ಅಡಿಯಲ್ಲಿ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಪ್ರಕೋಸ್ವ ಸದಸ್ಯ ಮಧು ಗಂಗಾಧರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಈಗಾಗಲೇ ಮಳವಳ್ಳಿ, ಮಂಡ್ಯದಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಗಿಡ ನೆಡುವ ಕಾರ್ಯ ಮಾಡಲಾಗಿದೆ. ಸರಗೂರಿನ ಧಾರ್ಮಿಕ ಸ್ಥಳದಲ್ಲಿ ಸ್ವಚ್ಛತಾ ಮತ್ತು ಸಸಿ ನೆಡುವುದು ಹಾಗೂ ಗುಡಿ ಕೈಗಾರಿಕೆ ಕೆಲಸ ಮಾಡುವ ಇಬ್ಬರು ಕಾರ್ಮಿಕರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ’ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎನ್.ಕೃಷ್ಣ, ಕಾರ್ಯದರ್ಶಿ ಬಾಲು, ಜಿಲ್ಲಾ ಸಹ ವಕ್ತಾರ ಎಚ್.ಬಿ.ಶಿವಲಿಂಗಸ್ವಾಮಿ, ಸಂಚಾಲಕ ನಾಗೇಗೌಡ, ಎಸ್.ಸಿ.ಮೋರ್ಚಾ ಅಧ್ಯಕ್ಷ ಚಿಕ್ಕಣ್ಣ, ಶಿವಣ್ಣ, ಬಸವರಾಜು, ಶಶಿಕುಮಾರ್, ಮಹದೇವಸ್ವಾಮಿ, ಸಿ.ಎಂ.ಕುಮಾರಸ್ವಾಮಿ, ದಿವಾಕರ್, ನಂಜುಂಡಸ್ವಾಮಿ, ಮಹೇಶ್, ಉಮೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.