ಮದ್ದೂರು: ‘ಪಟ್ಟಣವನ್ನು ಬಿಎಂಐಸಿಯಿಂದ ಕೈಬಿಡಲು ವಿಧಾನಸಭಾ ಅಧಿವೇಶನದಲ್ಲಿ ದನಿ ಎತ್ತುವೆ’ ಎಂದು ಶಾಸಕ ಕೆ. ಎಂ ಉದಯ್ ತಿಳಿಸಿದರು.
ಪಟ್ಟಣದ ಶಿವಪುರದ ರಸ್ತೆ ಡಾoಬರೀಕರಣ ಕಾಮಗಾರು ಹಾಗೂ ಬಳಿಯ ಕೆ. ಕೋಡಿಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
‘ಈ ಹಿಂದೆ ಎಸ್. ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮದ್ದೂರು ಬಿಎಂಐಸಿ ವ್ಯಾಪ್ತಿಗೆ ಒಳಪಟ್ಟಿತ್ತು .ಆದರೆ ನಂತರದ ದಿನಗಳಲ್ಲಿ ಅದರಿಂದ ಪಟ್ಟಣದ ಅಭಿವೃದ್ಧಿಗೆ ತೊಡಕಾಗುತ್ತಿದ್ದು, ನಿವೇಶನ ಮಾಡಲು, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಸಾಲ ಸಿಗುತ್ತಿಲ್ಲ ಎಂಬುದರ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆಯುತ್ತೇನೆ’ ಎಂದರು.
ಪಟ್ಟಣದ ಪೇಟೆ ಬೀದಿ ವಿಸ್ತರಣೆ ಸಂಬಂಧ ಡಿಪಿಆರ್ ಪ್ರಕ್ರಿಯೆ ಹಂತದಲ್ಲಿದ್ದು, ನಂತರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಕೀರ್ತಿ ಗೌಡ, ಮುಖಂಡರಾದ ಮೋನಿ, ಅಪ್ಪೆಗೌಡ, ಪುಟ್ಟಪ್ಪ, ಮಹಾಲಿಂಗಯ್ಯ, ನಾಗರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.