ADVERTISEMENT

ಬಿಎಂಐಸಿಯಿಂದ ಮದ್ದೂರು ಪಟ್ಟಣ ಕೈಬಿಡಲು ಸುಪ್ರೀಂ ಕೋರ್ಟ್‌ಗೆ ಮನವಿ: ಶಾಸಕ ಉದಯ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:43 IST
Last Updated 21 ಆಗಸ್ಟ್ 2025, 4:43 IST
ಮದ್ದೂರು ತಾಲ್ಲೂಕಿನ ಕುದರಗುಂಡಿ ಗ್ರಾಮದ ಬಳಿ ₹3.75 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ಎಂ ಉದಯ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ಮುಖಂಡರಾದ ಹರೀಶ್, ಮಹಲಿಂಗಯ್ಯ, ಪೊಲೀಸ್ ಮಹದೇವು, ನಂದೀಶ್ ಭಾಗವಹಿಸಿದ್ದರು
ಮದ್ದೂರು ತಾಲ್ಲೂಕಿನ ಕುದರಗುಂಡಿ ಗ್ರಾಮದ ಬಳಿ ₹3.75 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ಎಂ ಉದಯ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ಮುಖಂಡರಾದ ಹರೀಶ್, ಮಹಲಿಂಗಯ್ಯ, ಪೊಲೀಸ್ ಮಹದೇವು, ನಂದೀಶ್ ಭಾಗವಹಿಸಿದ್ದರು   

ಮದ್ದೂರು: ಮದ್ದೂರು ಪಟ್ಟಣವನ್ನು ಬಿಎಂಐಸಿಯಿಂದ ಕೈಬಿಡಲು ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಅರ್ಜಿ ಸಲ್ಲಿಸಲಾಗುವುದು ಎಂದು ಶಾಸಕ ಕೆ. ಎಂ ಉದಯ್ ತಿಳಿಸಿದರು.

ತಾಲ್ಲೂಕಿನ ಕುದರಗುಂಡಿ ಗ್ರಾಮದ ಬಳಿ ಕುದರಗುಂಡಿ ಕಾಲೊನಿ, ವಳೆಗೆರೆಹಳ್ಳಿ, ಗೆಜ್ಜಲಗೆರೆ, ಗೆಜ್ಜಲಗೆರೆ ಕಾಲೊನಿ ವರೆಗೆ 3 ಕಿ.ಮೀ ವರೆಗಿನ ₹3.75 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಶಕಗಳ ಹಿಂದೆಯೇ ಮದ್ದೂರು ಪಟ್ಟಣವನ್ನು ಬಿಎಂಐಸಿ ವ್ಯಾಪ್ತಿಗೆ ಸೇರಿಸಲಾಗಿದೆ. ಇದರಿಂದ ಪಟ್ಟಣದ ಅಭಿವೃದ್ಧಿಗೆ ತೊಡಕಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವಾರು ವರ್ಷಗಳಿಂದ ದೂರು ಕೇಳಿಬರುತ್ತಿದೆ ಎಂದರು.

ADVERTISEMENT

ಈ ಬಗ್ಗೆ ನೆನ್ನೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಿಚಾರ ಮಂಡನೆ ಮಾಡಿ ಸದನದ ಗಮನಕ್ಕೆ ತರಲಾಗಿ. ಕೆಆರ್‌ಡಿಎಲ್, ಪಿಡಬ್ಲ್ಯೂಡಿ, ಬಿಎಂಐಸಿ ಸೇರಿದಂತೆ ಮೂರು ಇಲಾಖೆಗಳೊಂದಿಗೆ ಚರ್ಚೆ ನಡೆಸಿ ಕೈಬಿಡಲು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ರವರ ಮಾರ್ಗದರ್ಶನದಂತೆ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಈ ಬಗ್ಗೆ ಆದಷ್ಟು ಬೇಗ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಬಿಎಂಐಸಿ ತೆರವಿಗೆ ಉಂಟಾಗಿರುವ ಕಾನೂನು ಅಡ್ಡಿಯನ್ನು ಸರಿಪಡಿಸಲಾಗುವುದು ಎಂದರು. ಮುಖಂಡರಾದ ಹರೀಶ್, ಮಹಾಲಿಂಗಯ್ಯ, ಮಹದೇವಪ್ಪ, ನಂದೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.