
ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಅಕ್ಕಿಹೆಬ್ಬಾಳು ಸಮೀಪ ಬೆಂಗಳೂರು-ಜಾಲ್ಸೂರು ಹೆದ್ದಾರಿಯ ಹೇಮಾವತಿ ಸೇತುವೆ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದು, ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾದರು.
ಪಟ್ಟಣದ ನಿವಾಸಿ ಭಗವಾನ್ ಅಂಗಡಿಯ ಚೇತನ್‌ಕುಮಾರ್ ಪುತ್ರ ಅನಿಚೇತ್ (21), ಅಗ್ರಹಾರದ ನಿವಾಸಿ ಸರ್ವೇಯರ್ ಅಶೋಕ್ ಅವರ ಪುತ್ರ ಚಿರಂಜಿವಿ (22) ಮತ್ತು ಕುಶಾಲನಗರದ ಬೈಲುಕುಪ್ಪೆಯ ನಿವಾಸಿ ಸೋಮಶೇಖರ್ ಪುತ್ರ ಪವನ್ ಶೆಟ್ಟಿ ಮೃತರು. ಸಾಗರ್ ಎನ್ನುವವರಿಗೆ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಾಲ್ವರು ಶನಿವಾರ ಮಧ್ಯರಾತ್ರಿ ಅಕ್ಕಿಹೆಬ್ಬಾಳು ಕಡೆಯಿಂದ ಕೆ.ಆರ್.ಪೇಟೆಯತ್ತ ಬರುತ್ತಿದ್ದರು.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಆನಂದೇಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.