ನಾಗಮಂಗಲ: ತಾಲ್ಲೂಕಿನ ತಟ್ಟಹಳ್ಳಿ ಗ್ರಾಮದ ನಿವಾಸಿ ಅಪ್ಪೇಗೌಡ ಅವರಿಗೆ ಸೇರಿದ್ದ ನಾಲ್ಕು ಹಸುಗಳನ್ನು ಕಳ್ಳರು ಈಚೆಗೆ ಕಳ್ಳತನ ಮಾಡಿದ್ದಾರೆ.
10 ಹಸುಗಳ ಪೈಕಿ ಸುಮಾರು 5 ಲಕ್ಷ ಬೆಲೆಬಾಳುವ ನಾಲ್ಕು ಹಸುಗಳನ್ನು ಕಳ್ಳರು ಕಳವು ಮಾಡಿದ್ದು, ಹೈನುಗಾರ ಕುಟುಂಬ ಕಂಗಾಲಾಗಿದೆ.
ಅಪ್ಪೇಗೌಡ ಕುಟುಂಬದವರು ಹಲವು ವರ್ಷಗಳಿಂದ ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದರು. ತಮ್ಮ ತೋಟದ ಮನೆಯ ಕಾಂಪೌಂಡ್ ಬಳಿ ಕಟ್ಟಿದ್ದ 10 ಹಸುಗಳ ಪೈಕಿ ಎರಡು ಗರ್ಭ ಧರಿಸಿದ್ದ ಎಚ್.ಎಫ್ ಹಸುಗಳು ಸೇರಿದಂತೆ ನಾಲ್ಕು ಹಸುಗಳನ್ನು ಕಳ್ಳತನ ಮಾಡಿದ್ದು, ಅವುಗಳ ಬೆಲೆ ₹ 5 ಲಕ್ಷ ಎಂದು ಅಂದಾಜಿಸಲಾಗಿದೆ.
ಕುಟುಂಬಸ್ಥರು ಗ್ರಾಮದ ಸುತ್ತಮುತ್ತಲ ಜಮೀನಿನಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.
‘ಹಸುಗಳನ್ನು ನಂಬಿ ಬದುಕು ನಡೆಸುತ್ತಿದ್ದ ನಮಗೆ ದಿಕ್ಕು ತೋಚದಂತಾಗಿದ್ದು, ಇನ್ನು ನಮಗೆ ಯಾರು ಗತಿ’ ಎಂದು ವೃದ್ಧ ಅಪ್ಪೇಗೌಡರ ಕುಟುಂಬದ ಸದಸ್ಯರು ಅಳಲು ತೋಡಿಕೊಂಡರು.
ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.