ADVERTISEMENT

ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರಕ್ಕೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 2:45 IST
Last Updated 20 ಡಿಸೆಂಬರ್ 2020, 2:45 IST
ಜಾನೇಗೌಡ
ಜಾನೇಗೌಡ   

ಕಿಕ್ಕೇರಿ: ಹೋಬಳಿಯ ಗಡಿಗ್ರಾಮದ ನಿವಾಸಿ, ನಿವೃತ್ತ ಪ್ರಾಂಶುಪಾಲ ಜಾನೇಗೌಡ ಅವರು ಗ್ರಾಮ ಪಂಚಾಯಿತಿ ಸದಸ್ಯನಾಗಿ ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಬಲಪಡಿಸಬೇಕು ಎಂಬ ಹಂಬಲದಲ್ಲಿದ್ದಾರೆ.

ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಊಗಿನಹಳ್ಳಿ ಗ್ರಾಮದಿಂದ ಸಾಮಾನ್ಯ ವರ್ಗದಿಂದ ಸ್ಪರ್ಧಿಸುತ್ತಿರುವ ಅವರು ಎಂ.ಎ, ಎಂ.ಎಡ್‌, ಎಂ.ಫಿಲ್ ಮಾಡಿ ಕೆ.ಆರ್.ಪೇಟೆಯ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲವು ತಿಂಗಳ ಹಿಂದೆ ನಿವೃತ್ತರಾದರು.

ನಿರುದ್ಯೋಗಿ ಯಾಗಿದ್ದ ಸಂದರ್ಭ 1996ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಚುನಾಯಿತರಾಗಿ ಗ್ರಾಪಂ ಅಧ್ಯಕ್ಷರಾಗಿದ್ದರು. ಅಧಿಕಾರಾವಧಿಯಲ್ಲಿ ಬದಲಾವಣೆ ಮಾಡಿದ್ದರು. ಸರ್ಕಾರದ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಮೊದಲ ಗುರಿ. ಯುವಕರು, ಪ್ರಜ್ಞಾವಂತರು, ಪ್ರಾಮಾಣಿಕರು ಗ್ರಾಪಂ.ನಲ್ಲಿ ಇದ್ದಾಗ ಮಾತ್ರ ಗ್ರಾಮ ಸ್ವರಾಜ್ಯದ ಪರಕಲ್ಪನೆ ಕಾಣಬಹುದು ಎನ್ನುವುದು ಅವರ ವಿಶ್ವಾಸದ ಮಾತು.

ADVERTISEMENT

16 ಸದಸ್ಯರ ಗ್ರಾ.ಪಂ ರಾಜ್ಯ ಹೆದ್ದಾರಿಯಲ್ಲಿದೆ. ಅಪಾರವಾದ ಶಿಷ್ಯವೃಂದ, ಸ್ನೇಹಿಗಳು ಜೊತೆಗಿದ್ದು ಪಾರದರ್ಶಕ ಆಡಳಿತ ನಡೆಸುವೆ. ಹಣ, ಹೆಂಡ, ಕುಡಿತದ ಮೇಲೆ ನಿಂತಿರುವ ಚುನಾವಣೆಗೆ ಬದಲಾವಣೆ ಕಾಣಲು ಮನ, ಮನೆಗೆ ತಲುಪಿ ಜಾಗೃತಿ ಮೂಡಿಸುವೆ. ಮೊದಲ ಆದ್ಯತೆಯಾಗಿ ಒಳಚರಂಡಿ, ಶುದ್ಧ ಕುಡಿಯುವ ನೀರು, ದೇವಾಲಯ ಜೀರ್ಣೋದ್ಧಾರ, ರಸ್ತೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದಕ್ಕೆ ಆದ್ಯತೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.