
ಮಂಡ್ಯ: ಅರಣ್ಯ ಪ್ರದೇಶದಲ್ಲಿ ತಂತಿ ಬೇಲಿ ನಿರ್ಮಿಸಿದ್ದ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಅರಣ್ಯ ಭವನದ (ಡಿಸಿಎಫ್ ಕಚೇರಿ) ಪೀಠೋಪಕರಣ ಮತ್ತು 14 ಕಂಪ್ಯೂಟರ್‌ಗಳನ್ನು ಬುಧವಾರ ಜಪ್ತಿ ಮಾಡಲಾಯಿತು.
ಗುತ್ತಿಗೆದಾರರಾದ ನಾಗಮಂಗಲ ತಾಲ್ಲೂಕಿನ ಮಲ್ಲೇಗೌಡನಹಳ್ಳಿಯ ಎಂ.ವೈ. ಸುರೇಶ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿಯ ರಾಜಣ್ಣ ಜಿ.ಎನ್ ಅವರು, 2022ರಲ್ಲಿ ₹3.24 ಕೋಟಿ ವೆಚ್ಚದಲ್ಲಿ 51 ಕಿ.ಮೀ. ದೂರದವರೆಗೆ ತಂತಿಬೇಲಿ ಕಾಮಗಾರಿ ನಡೆಸಿದ್ದರು. ಬಿಲ್ ಸಲ್ಲಿಸಿದ್ದರೂ ಹಣ ಪಾವತಿಯಾಗಿರಲಿಲ್ಲ.
ನಿಗದಿತ ಸಮಯದೊಳಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದ್ದರೂ ಪಾವತಿಸದ ಕಾರಣ ಮತ್ತೆ ಪ್ರಕರಣ ದಾಖಲಿಸಿ ಜಪ್ತಿ ಆದೇಶ ತಂದಿದ್ದರು. ಡಿಸಿಎಫ್ ರಘು ಅವರು ಹಣ ಪಾವತಿಗೆ ಸಮಯಾವಕಾಶ ಕೋರಿ, ಜಪ್ತಿ ಮಾಡದಂತೆ ಮನವಿ ಮಾಡಿದರು. ಗುತ್ತಿಗೆದಾರರು ಅದಕ್ಕೆ ಒಪ್ಪಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.