ADVERTISEMENT

ಹೊಸ ರೋಗಿಗಳಿಗೆ ವಿಶ್ವಾಸ ತುಂಬಿದೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:25 IST
Last Updated 20 ಜುಲೈ 2020, 15:25 IST
ಬಿ.ಸಿ.ಸಂತೋಷ್‌ ಕುಮಾರ್‌
ಬಿ.ಸಿ.ಸಂತೋಷ್‌ ಕುಮಾರ್‌   

ಮಂಡ್ಯ: ಹೊಸ ರೋಗಿಗಳಿಗೆ ವಿಶ್ವಾಸ ತುಂಬಿದೆ. ಹೆಚ್ಚಿನ ಜನರು ನೆಗೆಟಿವ್ ವರದಿ ಬಂದು ಮನೆಗೆ ತೆರಳುವುದನ್ನು ನೋಡಿದಾಗ ವಿಶ್ವಾಸ ಮೂಡಿತು.

ಆರಂಭದಲ್ಲಿ ಇಸಿಜಿ, ರಕ್ತ ಪರೀಕ್ಷೆ ಮುಗಿಸಿ ಐದು ದಿನಗಳಿಗೆ ಆಗುವಷ್ಟು ಮಾತ್ರೆಗಳನ್ನು ಕೊಟ್ಟರು. ನಮ್ಮ ವಾರ್ಡ್‌ನಲ್ಲಿ 20 ಮಂದಿ ಇದ್ದರೂ ಪ್ರತಿಯೊಬ್ಬರೂ ಅಂತರ ಕಾಯ್ದುಕೊಂಡಿದ್ದೆವು. ದಿನ ಕಳೆದಂತೆ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಉಂಟಾಗಲಿಲ್ಲ. ಹೊಸದಾಗಿ ಬರುವ ರೋಗಿಗಳಿಗೆ ಧೈರ್ಯ ಮೂಡಿಸುವಷ್ಟು ವಿಶ್ವಾಸ ಬಂತು.

ನನ್ನ ತಾಯಿಗೆ 60 ವರ್ಷ ವಯಸ್ಸಾಗಿದ್ದು ಅವರಿಗೂ ಕೋವಿಡ್‌ ದೃಢಪಟ್ಟಿತ್ತು. ಅವರು ಐಸಿಯುನಲ್ಲಿ ಕೆಲವು ದಿನ ಇದ್ದರು. ನಂತರ ಸಾಮಾನ್ಯ ವಾರ್ಡ್‌ಗೆ ಬಂದಿದ್ದು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೂ ಕೋವಿಡ್‌ಮುಕ್ತವಾಗಿ ಶೀಘ್ರ ಮನೆಗೆ ಮರಳಲಿದ್ದಾರೆ.

ADVERTISEMENT

ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯರು, ಇತರ ಸಿಬ್ಬಂದಿ ತೋರಿಸಿದ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಇಡೀ ವಾರ್ಡ್‌ ಸ್ಯಾನಿಟೈಸ್‌ ಮಾಡುತ್ತಿದ್ದರು. ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿದ್ದರು. ಕುಡಿಯುವ ನೀರು, ಬಿಸಿನೀರು ಸ್ನಾನ, ಊಟಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಮಾತನಾಡಬಹುದಾಗಿತ್ತು.

ವೈದ್ಯರು ನಮ್ಮ ಜೊತೆ ಆಪ್ತವಾಗಿ ಮಾತನಾಡುತ್ತಿದ್ದರು. ಕೋವಿಡ್‌ಗೆ ಯಾರೂ ಹೆದರಬೇಕಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ದೊರೆಯುತ್ತಿರುವ ಉತ್ತಮ ಚಿಕಿತ್ಸೆ, ಸೌಲಭ್ಯಗಳಿಂದಲೇ ರೋಗ ಮುಕ್ತರಾಗಿ ಮನೆಗೆ ಬರಬಹುದು. ಆಸ್ಪತ್ರೆಯಲ್ಲಿ ಕೊನೆಕೊನೆಗೆ ಕೋವಿಡ್‌ ಭಯ ಸಂಪೂರ್ಣವಾಗಿ ದೂರವಾಗಿತ್ತು. ಒಂದು ದಿನ ಎಲ್ಲರೂ ಸೇರಿ ನೃತ್ಯ ಮಾಡಿದೆವು.

– ಬಿ.ಸಿ.ಸಂತೋಷ್‌ಕುಮಾರ್‌, ಬಲ್ಲೇನಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.