ಮಂಡ್ಯ: ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
1,73,680ನೇ ರೋಗಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ್ಯುಮೋನಿಯಾ, ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿದ್ದ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಅವರನ್ನು ಕೋವಿಡ್ ಕಾರ್ಯಸೂಚಿ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸೋಮವಾರ 26 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 380ಕ್ಕೆ ಏರಿಕೆಯಾಗಿದೆ. ಮಂಡ್ಯ ತಾಲ್ಲೂಕಿನಲ್ಲಿ ಒಬ್ಬರು, ಮದ್ದೂರು 3, ಮಳವಳ್ಳಿ 2, ಶ್ರೀರಂಗಪಟ್ಟಣ 1, ಕೆ.ಆರ್.ಪೇಟೆ 4, ನಾಗಮಂಗಲ ತಾಲ್ಲೂಕಿನ 7 ಮಂದಿಗೆ ಕೋವಿಡ್ ಪತ್ತೆಯಾಗಿದೆ.
ಕೋವಿಡ್‌ನಿಂದ ಗುಣಮುಖರಾದ 82 ಮಂದಿಯನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ಮಂಡ್ಯ 40, ಮದ್ದೂರು 5, ಶ್ರೀರಂಗಪಟ್ಟಣ 20, ಕೆ.ಆರ್.ಪೇಟೆ 12, ನಾಗಮಂಗಲ ತಾಲ್ಲೂಕಿನ 4 ಮಂದಿಯನ್ನು ಬಿಡುಗಡೆ ಮಾಡಲಾಯಿತು. ಒಟ್ಟು ರೋಗಿಗಳಲ್ಲಿ ಇಲ್ಲಿಯವರೆಗೂ 1,986 ಮಂದಿ ಗುಣಮುಖರಾಗಿದ್ದಾರೆ. 1,356 ಪ್ರಕರಣಗಳು ಸಕ್ರಿಯವಾಗಿವೆ.
ಅಸಮಾಧಾನ: ಕೋವಿಡ್ ರೋಗಿಗಳು ಪತ್ತೆಯಾದ ಮನೆ ಹಾಗೂ ಬೀದಿಗಳಲ್ಲಿ ಸೋಂಕುನಿವಾರಕ ಸಿಂಪಡಣೆ ಮಾಡುತ್ತಿಲ್ಲ ಎಂದು ವಿವಿಧೆಡೆ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವೇರಿ ನಗರ, ಕಣ್ವ ಮಾರ್ಗದಲ್ಲಿ ಪತ್ತೆಯಾದ ಪತ್ತೆಯಾದ ರೋಗಿಯ ಮನೆ, ಬೀದಿಯಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೋವಿಡ್ ಅಂಕಿ–ಅಂಶ
ಜಿಲ್ಲೆಯಲ್ಲಿ ಒಟ್ಟು: 3,380
ಸಕ್ರಿಯ ಪ್ರಕರಣ: 1,356
ಏರಿಕೆ: 26
ಗುಣಮುಖ: 1,986
ಏರಿಕೆ: 82
ಸಾವು: 37
ಏರಿಕೆ: 01
ಜಿಲ್ಲೆಯಲ್ಲಿ ಒಟ್ಟು: 3,380
ಸಕ್ರಿಯ ಪ್ರಕರಣ: 1,356
ಏರಿಕೆ: 26
ಗುಣಮುಖ: 1,986
ಏರಿಕೆ: 82
ಸಾವು: 37
ಏರಿಕೆ: 01
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.