ADVERTISEMENT

ಮಳವಳ್ಳಿ: ಯೂರಿಯಾ ತಿಂದು ಮೂರು ಹಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 23:42 IST
Last Updated 12 ಆಗಸ್ಟ್ 2025, 23:42 IST
ಮಳವಳ್ಳಿ ತಾಲ್ಲೂಕಿನ ನಾಗೇಗೌಡನದೊಡ್ಡಿ ಗ್ರಾಮದಲ್ಲಿ ಯೂರಿಯಾ ತಿಂದು ಸಾವನ್ನಪ್ಪಿರುವ ಹಸುಗಳು.
ಮಳವಳ್ಳಿ ತಾಲ್ಲೂಕಿನ ನಾಗೇಗೌಡನದೊಡ್ಡಿ ಗ್ರಾಮದಲ್ಲಿ ಯೂರಿಯಾ ತಿಂದು ಸಾವನ್ನಪ್ಪಿರುವ ಹಸುಗಳು.   

ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಪಶು ಆಹಾರ ಎಂದು ಭಾವಿಸಿ ಯೂರಿಯಾ ತಿಂದು ಮೂರು ಹಸುಗಳು ಸಾವನ್ನಪ್ಪಿವೆ.

ರೈತ ಸಿದ್ದಲಿಂಗೇಗೌಡ ಅವರ ಎರಡು ಹಸುಗಳು, ಮಹದೇವ ಅವರಿಗೆ ಸೇರಿದ ಒಂದು ಹಸು ಮೃತಪಟ್ಟಿದೆ. ಹಸುಗಳನ್ನು ಹೊರಗಡೆ ಕಟ್ಟಲು ಬಿಟ್ಟಾಗ ಈ ಅವಘಡ ಸಂಭವಿಸಿದೆ. 

ವಡ್ಡರಹಳ್ಳಿ ಪಶು ವೈದ್ಯಾಧಿಕಾರಿ ವೈದ್ಯಕೀಯ ಪರೀಕ್ಷೆ ನಡೆಸಿದರು. ‘ಹಸುಗಳಿಂದಲೇ ಕುಟುಂಬದ ನಿರ್ವಹಣೆ ಆಗುತ್ತಿತ್ತು. ದಿಕ್ಕೇ ತೋಚದಂತಾಗಿದೆ’ ಎಂದು ಸಿದ್ದಲಿಂಗೇಗೌಡ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.