ADVERTISEMENT

ಮೊಬೈಲ್‌ ಬಳಸದಂತೆ ಬುದ್ಧಿ ಹೇಳಿದ್ದಕ್ಕೆ ತಾಯಿಯ ಕೊಲೆ: ಬಿಬಿಎಂ ವಿದ್ಯಾರ್ಥಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 16:06 IST
Last Updated 31 ಜುಲೈ 2020, 16:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಮೊಬೈಲ್‌ ಫೋನ್‌ ಹೆಚ್ಚು ಬಳಕೆ ಮಾಡದಂತೆ ಬುದ್ಧಿ ಹೇಳಿದ ತಾಯಿಯನ್ನೇ ಪುತ್ರ, ಬಿಬಿಎಂ ವಿದ್ಯಾರ್ಥಿಯೊಬ್ಬ ಚಕ್ಕುಲಿ ಹೊರಳಿನಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾನಗರ ಕೆ.ಆರ್‌.ರಸ್ತೆಯ ಮನೆಯೊಂದರ ಔಟ್‌ಹೌಸ್‌ನಲ್ಲಿ ವಾಸವಿದ್ದ ಲಕ್ಷ್ಮಿ (46) ಕೊಲೆಯಾದ ಮಹಿಳೆ. ಮನು ಶರ್ಮಾ (21) ತಾಯಿಯನ್ನೇ ಕೊಲೆ ಮಾಡಿದ ವಿದ್ಯಾರ್ಥಿ. ಘಟನೆ ಜುಲೈ 29ರಂದು ನಡೆದಿದ್ದು ಜುಲೈ 30ರಂದು ಬೆಳಕಿಗೆ ಬಂದಿದೆ. ಮನೆಯ ಮಾಲೀಕ ರಮೇಶ್‌ ಜುಲೈ 30ರಂದು ನೀಡಿದ್ದ ದೂರಿನನ್ವರ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಆರೋಪಿಯ ಬೆನ್ನತ್ತಿದ ಪೊಲೀಸರು ಮನುಶರ್ಮಾನನ್ನು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾದರು.

ತಾಯಿಯು ಮೊಬೈಲ್‌ ಬಳಸದಂತೆ ನಿರ್ಬಂಧ ವಿಧಿಸಿದ್ದರು. ಮನೆಯಿಂದ ಹೊರಗೆ ಹೋಗದಂತೆ ಬುದ್ಧಿ ಹೇಳುತ್ತಿದ್ದರು. ಇದರಿಂದ ಕೋಪಗೊಂಡು ಚಕ್ಕಲಿ ಹೊರಳಿನಿಂದ ತಲೆಗೆ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದರು. ಪ್ರಕರಣ ಪಶ್ಚಿಮ ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.