ADVERTISEMENT

ದಲಿತ ಯುವಕನ ಆತ್ಮಹತ್ಯೆ ಪ್ರಕರಣದ ತನಿಖೆಯಾಗಲಿ: ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:05 IST
Last Updated 21 ಮೇ 2025, 14:05 IST
ಕೆ.ಆರ್‌ ಪೇಟೆ ತಾಲ್ಲೂಕಿನ ಕತ್ತರ ಘಟ್ಟ ಗ್ರಾಮಕ್ಕೆ ರಾಜ್ಯ ಬಿಎಸ್‌ಪಿ ಅಧ್ಯಕ್ಷ  ಕೃಷ್ಣಮೂರ್ತಿ ಭೇಟಿ ನೀಡಿ ದಲಿತ ಯುವಕನ ಶವ ಸಿಕ್ಕಿದ ಸ್ಥಳ ಪರಿಶೀಲಿಸಿದರು
ಕೆ.ಆರ್‌ ಪೇಟೆ ತಾಲ್ಲೂಕಿನ ಕತ್ತರ ಘಟ್ಟ ಗ್ರಾಮಕ್ಕೆ ರಾಜ್ಯ ಬಿಎಸ್‌ಪಿ ಅಧ್ಯಕ್ಷ  ಕೃಷ್ಣಮೂರ್ತಿ ಭೇಟಿ ನೀಡಿ ದಲಿತ ಯುವಕನ ಶವ ಸಿಕ್ಕಿದ ಸ್ಥಳ ಪರಿಶೀಲಿಸಿದರು   

ಕೆ. ಆರ್. ಪೇಟೆ: ತಾಲ್ಲೂಕಿನ ಕತ್ತರ ಘಟ್ಟಕ್ಕೆ ಗ್ರಾಮಕ್ಕೆ ರಾಜ್ಯ ಬಿಎಸ್‌ಪಿ ಅಧ್ಯಕ್ಷ ಕೃಷ್ಣಮೂರ್ತಿ ಭೇಟಿ ನೀಡಿ ಗ್ರಾಮದಲ್ಲಿ ನಡೆದಿರುವ ದಲಿತ ಯುವಕನ ಮರಣ ಆತ್ಮಹತ್ಯೆಯಲ್ಲ, ಹತ್ಯೆ ಆಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಬಿಎಸ್‌ಪಿ ಪಕ್ಷದ ಪದಾಧಿಕಾರಿಗಳೊಂದಿಗೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮಕ್ಕೆ ಭೇಟಿ ನೀಡಿ ದಲಿತ ಯುವಕ ಹುಲ್ಲಿನ ಮೆದೆಯಲ್ಲಿ ಬಿದ್ದು ಸತ್ತ ಸ್ಥಳ ಪರಿಶೀಲಿಸಿ ಮೃತ ಜಯಕುಮಾರ್ ಮನೆಗೆ ಭೇಟಿ ನೀಡಿ, ಅವರ ಪತ್ನಿ ಲಕ್ಷ್ಮೀ ಅವರಿಗೆ ಸಾಂತ್ವನ ಹೇಳಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ‘ಕತ್ತರಘಟ್ಟ ಗ್ರಾಮದಲ್ಲಿ ನಡೆದಿರುವ ಘಟನೆ ಸಂಚು ನಡೆಸಿ ಕೊಲೆ ಮಾಡಿರುವಂತೆ ಕಂಡು ಬರುತ್ತಿದೆ. ಪೊಲೀಸರು ಘಟನೆಯನ್ನು ಸೂಕ್ಷ್ಮವಾಗಿ ನಿಬಾಯಿಸಿಲ್ಲ. ಸೂಕ್ತ ಸಂದರ್ಭದಲ್ಲಿ ರಕ್ಷಣೆ ನೀಡಿಲ್ಲ. ಜಯಕುಮಾರ್ ಪತ್ನಿ ತನ್ನ ಗಂಡನನ್ನು ಗ್ರಾಮದ ರೌಡಿಶೀಟರ್ ಕೊಲೆ ಮಾಡಿದ್ದಾನೆಂದು ಹೇಳಿದರೂ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು’ ಎಂದು ಆರೋಪಿಸಿದರು.

ADVERTISEMENT

ಬಿಸ್‌ಪಿ ತಾಲೂಕು ಘಟಕದ ಮುಖಂಡರಾದ ಬಸ್ತಿ ಪ್ರದೀಪ್, ಗಂಗಾಧರ್, ಚೆಲುವರಾಜು, ಪರಮೇಶ್, ಗೋವಿಂದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.