ADVERTISEMENT

ಜ್ಞಾನವಾಪಿ ಮಸೀದಿಯಂತೇ ‘ಶ್ರೀರಂಗಪಟ್ಟಣ ಜಾಮಿಯಾ ಮಸೀದಿ’ ಸರ್ವೆಗೆ ಒತ್ತಾಯ

ವಿಶ್ವ ಹಿಂದೂ ಪರಿಷತ್‌, ಭಜರಂಗದಳದ ಸದಸ್ಯರಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 12:54 IST
Last Updated 20 ಮೇ 2022, 12:54 IST
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ    

ಮಂಡ್ಯ: ದೆಹಲಿ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದಂತೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲೂ ವಿಡಿಯೋಗ್ರಫಿ ಸರ್ವೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್‌, ಭಜರಂಗದಳದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಜಾಮಿಯಾ ಮಸೀದಿ ಮೂಲತಃ ಮೂಡಲಬಾಗಿಲು ಆಂಜನೇಯನ ದೇವಾಲಯವಾಗಿತ್ತು. ಟಿಪ್ಪು ಸುಲ್ತಾನ್‌ ಆಂಜನೇಯ ದೇವಾಲಯವನ್ನು ನಾಶ ಮಾಡಿ ಮಸೀದಿ ನಿರ್ಮಾಣ ಮಾಡಿರುವುದಕ್ಕೆ ದಾಖಲೆಗಳಿವೆ. ಇದು ಮೈಸೂರು ರಾಜ್ಯದ ಗೆಜೆಟಿಯರ್‌, ಮಂಡ್ಯ ಜಿಲ್ಲೆ ಭಾಗ, 493, 394ನೇ ಪುಟದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದನ್ನು ಪರಿಗಣಿಸಿ ಹನುಮ ಪೂಜೆ, ಉಪಾಸನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಜ್ಞಾನವಾಪಿ ಮಸೀದಿ ಮಾದರಿಯಲ್ಲಿ ಸಂಶೋಧನೆ, ಉತ್ಖನನ ನಡೆಸಬೇಕು. ಆ ಮೂಲಕ ಅದು ಹನುಮಂತನ ದೇವಾಲಯವಾಗಿತ್ತು ಎಂಬ ಸತ್ಯವನ್ನು ತಿಳಿಸಬೇಕು. ಹನುಮಂತನ ದೇವಾಲಯದಲ್ಲಿ ಸದ್ಯ ಮದರಸಾ ನಡೆಸಲಾಗುತ್ತಿದೆ, ಅಡುಗೆ ಮಾಡಲಾಗುತ್ತಿದೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮಂದಿರದಿಂದ ಮುಸ್ಲಿಮರನ್ನು ತೆರವುಗೊಳಿಸಬೇಕು ಎಂದು ಎಂದು ವಿಎಚ್‌ಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸಿ.ಕೆ.ಬಾಲಕೃಷ್ಣ, ಸಹಕಾರ್ಯದರ್ಶಿ ಪುನೀತ್‌, ಸಂಯೋಜಕ ಬಸವರಾಜು ಇತರರು ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.