
ಮಂಡ್ಯ: ಧರ್ಮಸ್ಥಳದಲ್ಲಿ ತನಿಖೆಯಾಗದ ಕೊಲೆ, ನಾಪತ್ತೆ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಡಿ.16ರಂದು ಬೆಳಿಗ್ಗೆ 10ಕ್ಕೆ ಬೆಳ್ತಂಗಡಿಯಲ್ಲಿ ನಡೆಯಲಿರುವ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾದಲ್ಲಿ ಮಂಡ್ಯ ಜಿಲ್ಲೆಯ ಮಹಿಳೆಯರು ಬೆಂಬಲ ನೀಡುತ್ತಿದ್ದಾರೆ ಎಂದು ವಕೀಲ ಬಿ.ಟಿ.ವಿಶ್ವನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ನಾಡಿನಾದ್ಯಂತ ಮಹಿಳೆಯರು ಈ ಸಮಾವೇಶವನ್ನು ಬೆಂಬಲಿಸುತ್ತಿದ್ದು, ‘ಈ ಮೂಲಕ ಅಲ್ಲಿನ ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆಗಳ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಲಾಗುವುದು’ ಎಂದರು.
‘ಜಿಲ್ಲೆಯಿಂದ 50ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುತ್ತಿದ್ದು, ಬೆಳ್ತಂಗಡಿಯ ಮಾರಿಗುಡಿಯಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಧರ್ಮದ ಹೆಸರಿನಲ್ಲಿ ಓಟ್ ಬ್ಯಾಂಕ್‌ಗಾಗಿ ರಾಜಕೀಯ ಪಕ್ಷಗಳು ಸುಮ್ಮನಿದ್ದು, ಈ ಅಪರಾಧ ಪ್ರಕರಣಗಳ ಕಾರಣ ತಿಳಿಯಲು ಯಾವ ರಾಜಕೀಯ ಪಕ್ಷಗಳು ಏಕೆ ಕ್ರಮ ವಹಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಸಾಹಿತಿ ಜಿ.ಟಿ.ವೀರಪ್ಪ, ನಾಗರಾಜು(ನಾಗೇಶ್), ಸಿದ್ದರಾಜು, ಬಿ.ಕೃಷ್ಣಪ್ರಸಾದ್, ಕಿಶೋರ್ ಇದ್ದರು.