
ಮಂಡ್ಯ: 2025–26ನೇ ಸಾಲಿನಲ್ಲಿ ಮಂಡ್ಯ ಜಿಲ್ಲಾಡಳಿತದಿಂದ ನೀಡಲಾಗುವ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳ 33 ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ ಎಂ. (ನ್ಯಾಯಾಂಗ ಕ್ಷೇತ್ರ), ನಾಗಮಂಗಲ ತಾಲ್ಲೂಕು ಕಾರಭೈಲು ಗ್ರಾಮದ ಮರಿಯಪ್ಪ (ಮೂಡಲಪಾಯ ಯಕ್ಷಗಾನ), ಮದ್ದೂರಿನ ಎಂ.ಆರ್. ಕುಪ್ಪಸ್ವಾಮಿ (ರಂಗಭೂಮಿ), ಮಂಡ್ಯದ ಹೊಸಹಳ್ಳಿಯ ಇಕ್ಕಲಕ್ಕಿ ರಾಮಲಿಂಗೇಗೌಡ (ಸಹಕಾರ ಕ್ಷೇತ್ರ), ಸಂತೆಕಸಲಗೆರೆ ಬಸವರಾಜು (ಜಾನಪದ ಕ್ಷೇತ್ರ, ನಾಟಕ), ತಗ್ಗಹಳ್ಳಿಯ ಬಿಳೀಗೌಡ (ಸಾವಯವ ಕೃಷಿ), ಹಲಗೂರು ಆಸ್ಪತ್ರೆಯ ದೇವರಾಜು (ಸಮಾಜಸೇವೆ), ಹೊಸಹೊಳಲು ಗ್ರಾಮದ ಎಚ್.ಪಿ. ಅಶೋಕ್‌ಕುಮಾರ್ (ಡೋಲು ವಾದಕ), ಪತ್ರಕರ್ತ ಸುದೇಶ್ ಪಾಲ್ (ಪತ್ರಿಕೋದ್ಯಮ), ಮುಟ್ಟನಹಳ್ಳಿಯ ರಾಜೇಂದ್ರ ಎಂ.ಟಿ. (ಕಾನೂನು ಕ್ಷೇತ್ರ), ನಂಬಿನಾಯಕಹಳ್ಳಿಯ ಎಂ.ಕೃಷ್ಣೇಗೌಡ (ಕೋಲಾಟ), ಕಣಿವೆಕೊಪ್ಪಲು ಗ್ರಾಮದ ಲವಕುಮಾರ (ಪರಿಸರ), ಮಂಡ್ಯ ಕೊಪ್ಪಲು ಗ್ರಾಮದ ಎಂ.ಕೆ. ಮಂಜುನಾಥ್ (ಸಮಾಜ ಸೇವೆ).
ನಾರಾಯಣಪುರ ಗ್ರಾಮದ ನರಸಿಂಹೇಗೌಡ (ಸಾಹಿತ್ಯ), ಗೌಡಹಳ್ಳಿ ಸಂಗೀತ ಜಿ.ಆರ್. (ಸುಗಮ ಸಂಗೀತ), ಕೃಷ್ಣರಾಜಪೇಟೆಯ ಅ.ಮ.ಶ್ಯಾಮೇಶ್ (ಸಾಹಿತ್ಯ), ವಕೀಲ ಸಿ.ಎಲ್.ಶಿವಕುಮಾರ್ (ಕಾನೂನು ಕ್ಷೇತ್ರ), ಲಿಂಗಾಪುರದ ಸತೀಶ್ ಎಲ್.ಆರ್. (ರಂಗಭೂಮಿ), ನಾಗಮಂಗಲದ ಎನ್.ಆರ್. ಚಂದ್ರಶೇಖರ್ (ಸಮಾಜ ಸೇವೆ), ಮಂಡ್ಯ ವಿ.ವಿ. ನಗರದ ಡಾ.ಛಾಯಾ ಆರ್.ಪಿ (ಜಾನಪದ ಕ್ಷೇತ್ರ–ಸಾಹಿತ್ಯ), ಗುತ್ತಲು ಕಾಲೊನಿಯ ಶೇಖ್ ಉಬೇದುಲ್ಲಾ (ಸಮಾಜ ಸೇವೆ), ಮಂಡ್ಯದ ಪತ್ರಕರ್ತ ಸುನೀಲ್‌ಕುಮಾರ್ (ಪತ್ರಿಕೋದ್ಯಮ).
ಮಲ್ಲನಾಯಕನಕಟ್ಟೆಯ ಮಂಜುಳಾ ರಮೇಶ್ (ಸಮಾಜ ಸೇವೆ), ಸೊಳ್ಳೆಪುರದ ಪ್ರಕಾಶ್ ಎಸ್.ಸಿ. (ಕೃಷಿ), ಮಂಡ್ಯದ ಪತ್ರಕರ್ತ ಬಿ.ಜೆ. ಸೋಮಶೇಖರ್ (ಪತ್ರಿಕೋದ್ಯಮ), ಮದ್ದೂರಿನ ಆನಂದ ಬಿ. (ಸಮಾಜ ಸೇವೆ), ದಮ್ಮಸಂದ್ರದ ಮನೋಡ್ ಡಿ.ಯು. (ಕ್ರೀಡಾ ಕ್ಷೇತ್ರ), ಮಂಡ್ಯದ ಎಂ.ಎಲ್. ತುಳಸೀಧರ್ (ಸಮಾಜ ಸೇವೆ), ಸಂತೆಬಾಚಹಳ್ಳಿಯ ಗೆಳೆಯರ ಬಳಗ (ಸಾಮಾಜಿಕ ಸೇವೆ), ತಾರಾ ಡಯಾಗ್ನಾಸ್ಟಿಕ್ ಸೆಂಟರ್‌ನ ಡಾ.ಚಂದ್ರಶೇಖರ್ ಕೆ. (ವೈದ್ಯಕೀಯ), ಚಾಕೇನಹಳ್ಳಿಯ ತಿಮ್ಮರಾಯಿಗೌಡ (ರಂಗಭೂಮಿ), ಪಾಂಡವಪುರದ ಪತ್ರಕರ್ತ ಚನ್ನಮಾದೇಗೌಡ (ಪತ್ರಿಕೋದ್ಯಮ), ಚಾಮಲಾಪುರದ ನಿಶ್ಚಿತ್‌ಗೌಡ ಸಿ. (ಕ್ರೀಡೆ) ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.