ADVERTISEMENT

ಡಾ.ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕಥಾಸಂಕಲನ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 19:14 IST
Last Updated 18 ಫೆಬ್ರುವರಿ 2026, 19:14 IST
ಬೆಸಗರಹಳ್ಳಿ ರಾಮಣ್ಣ 
ಬೆಸಗರಹಳ್ಳಿ ರಾಮಣ್ಣ    

ಮಂಡ್ಯ: ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ –2025ನೇ ಸಾಲಿನ ಪ್ರಶಸ್ತಿಗೆ ಲೇಖಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿ ₹50 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಒಳಗೊಂಡಿದೆ.

ಲೇಖಕರು ಪ್ರಥಮ ಮುದ್ರಣದ ಸಂಕಲನದ 3 ಪ್ರತಿಗಳನ್ನು ‘ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ನಂ.15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ, ಉಲ್ಲಾಳ ಆರ್‌ಟಿಒ ಕಚೇರಿ ಹತ್ತಿರ, ಬೆಂಗಳೂರು’– ಈ ವಿಳಾಸಕ್ಕೆ ಮಾರ್ಚ್‌ 15ರೊಳಗೆ ಕಳುಹಿಸಬೇಕು.

ಮಂಡ್ಯದಲ್ಲಿ ಜೂನ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಎಚ್‌.ಆರ್‌. ಸುಜಾತಾ ತಿಳಿಸಿದ್ದಾರೆ. ಮಾಹಿತಿಗೆ ಮೊ.ನಂ.99803 05837. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.