ADVERTISEMENT

ನಾಗಮಂಗಲ: 'ಅರ್ಜಿಗಳ ವಿಲೇವಾರಿಗೆ ಇ ಆಫೀಸ್'

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 14:41 IST
Last Updated 16 ಆಗಸ್ಟ್ 2023, 14:41 IST
ನಾಗಮಂಗಲ ಪಟ್ಟಣದ ಆಡಳಿತ ಸೌಧದಲ್ಲಿ ನೂತನ ಇ ಆಫೀಸ್ ಗೆ ತಹಶೀಲ್ದಾರ್ ನಯೀಂ ಉನ್ನೀಸಾ ಚಾಲನೆ ನೀಡಿದರು.ಉಪ ತಹಶೀಲ್ದಾರ್ ಗಣೇಶ್, ಆರ್ ಐ ಮಲ್ಲಿಕಾರ್ಜುನ್ ಇದ್ದರು.
ನಾಗಮಂಗಲ ಪಟ್ಟಣದ ಆಡಳಿತ ಸೌಧದಲ್ಲಿ ನೂತನ ಇ ಆಫೀಸ್ ಗೆ ತಹಶೀಲ್ದಾರ್ ನಯೀಂ ಉನ್ನೀಸಾ ಚಾಲನೆ ನೀಡಿದರು.ಉಪ ತಹಶೀಲ್ದಾರ್ ಗಣೇಶ್, ಆರ್ ಐ ಮಲ್ಲಿಕಾರ್ಜುನ್ ಇದ್ದರು.   

ನಾಗಮಂಗಲ: ರಾಜ್ಯ ಸರ್ಕಾರದ ಮತ್ತು ಕಂದಾಯ ಇಲಾಖೆಯ ಆದೇಶದಂತೆ ಸ್ಥಾಪಿಸಲಾಗುತ್ತಿರುವ ಇ ಆಫೀಸ್‌ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಪೂರಕವಾಗಲಿದೆ ಎಂದು ತಹಶೀಲ್ದಾರ್ ನಯೀಂ ಉನ್ನೀಸಾ ಹೇಳಿದರು.

ಪಟ್ಟಣದ ಆಡಳಿತ ಸೌಧದಲ್ಲಿ ನೂತನವಾಗಿ ಸ್ಥಾಪಿಸಿರುವ ಇ ಆಫೀಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕಿನ ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಇ ಆಫೀಸ್ ತೆರಯಲಾಗಿದ್ದು, ಸಾರ್ವಜನಿಕರಿಂದ ಅರ್ಜಿಗಳನ್ನು ಇಲ್ಲಿಯೇ ಪಡೆಯಲಾಗುತ್ತದೆ. ಜೊತೆಗೆ ಸಾರ್ವಜನಿಕರಿಗೆ ಕಡತಗಳ ವಿಲೇವಾರಿಗೆ ವಿಳಂಬವಾಗದಂತೆ ಶೀಘ್ರದಲ್ಲೇ ಕ್ರಮವಹಿಸಲು ಅನುಕೂಲವಾಗಲಿದೆ. ಜೊತೆಗೆ ಸಾರ್ವಜನಿಕರು ವಿವಿಧ ಕೆಲಸಗಳಿಗೆ ಸಲ್ಲಿಸುವ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿಯಬಹುದು. ಜೊತೆಗೆ ಪ್ರಾರಂಭದ ಕೆಲದಿಗಳನಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಉಪ ತಹಶೀಲ್ದಾರ್ ಗಣೇಶ್, ಆರ್‌ಐ ಮಲ್ಲಿಕಾರ್ಜುನ್ ಮತ್ತು ಗ್ರಾಮಲೆಕ್ಕಿಗರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.