ADVERTISEMENT

ಎಡಮುರಿ ಫಾಲ್ಸ್‌: ನೀರಿನಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳ ಸಾವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 14:02 IST
Last Updated 5 ಸೆಪ್ಟೆಂಬರ್ 2025, 14:02 IST
<div class="paragraphs"><p>ವಿದ್ಯಾರ್ಥಿಗಳ ಹುಡುಕಾಟದಲ್ಲಿ ತೊಡಗಿರುವ ಸಿಬ್ಬಂದಿ</p></div>

ವಿದ್ಯಾರ್ಥಿಗಳ ಹುಡುಕಾಟದಲ್ಲಿ ತೊಡಗಿರುವ ಸಿಬ್ಬಂದಿ

   

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಸಮೀಪದ ಎಡಮುರಿ ಫಾಲ್ಸ್‌ ಪ್ರಕೃತಿ ತಾಣದಲ್ಲಿ, ಕಾವೇರಿ ನದಿಯಲ್ಲಿ ಮುಳುಗಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಬೆಂಗಳೂರಿನ ಡಾನ್‌ ಬಾಸ್ಕೋ ಕಾಲೇಜಿನ ಬಿಬಿಎ ವಿದ್ಯಾರ್ಥಿಗಳಾದ ವಿಲಿಯಂ ಶ್ಯಾಂ (21) ಮತ್ತು ವೆಂಕಟೇಶ್ (21) ಮೃತಟ್ಟಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್‌ ನೇತೃತ್ವದ ತಂಡ ಮಧ್ಯಾಹ್ನದ ವೇಳೆಗೆ ಶವಗಳನ್ನು ನದಿಯಿಂದ ಮೇಲೆ ತೆಗೆದಿದ್ದು, ವಾರಸುದಾರರಿಗೆ ಒಪ್ಪಿಸಲಾಯಿತು.

ADVERTISEMENT

ಬೆಂಗಳೂರಿನಿಂದ 7 ಮಂದಿ ವಿದ್ಯಾರ್ಥಿಗಳ ತಂಡ ವಿಹಾರಕ್ಕೆಂದು ಎಡಮುರಿ ಫಾಲ್ಸ್‌ಗೆ ಬಂದಿತ್ತು. ಈಜಲು ನದಿಗೆ ಇಳಿದ ವೇಳೆ ವಿಲಿಯಂ ಶ್ಯಾಂ ಮತ್ತು ವೆಂಕಟೇಶ್ ಸುಳಿಗೆ ಸಿಕ್ಕಿ ನೀರಿನಲ್ಲಿ ಮುಳುಗಿದರು. ಅವರನ್ನು ರಕ್ಷಿಸಲು ಸಹಪಾಠಿಗಳು ಹಾಗೂ ಸ್ಥಳೀಯರು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಆರ್‌ಎಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.