ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ವೈಭವ ಪ್ಯಾಲೇಸ್‌ನ ಸಭಾಂಗಣದಲ್ಲಿ ಶನಿವಾರ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಶಾಲೆಗಳ ಉನ್ನತೀಕರಣದ ಹೆಜ್ಜೆಗಳು ಎಂಬ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ಆಚೀವರ್ಸ್ ಇಂಟರ್ ನ್ಯಾಪನಲ್ ಸ್ಕೂಲ್
ಮಳವಳ್ಳಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಯೊಂದಿಗೆ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಿದರೆ ಮಾತ್ರ ಸದೃಢ ಸ್ವಾಭಿಮಾನಿ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಪಟ್ಟಣದ ಮೈಸೂರು ರಸ್ತೆಯ ವೈಭವ ಪ್ಯಾಲೇಸ್ ನ ಸಭಾಂಗಣದಲ್ಲಿ ಶನಿವಾರ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಶಾಲೆಗಳ ಉನ್ನತೀಕರಣದ ಹೆಜ್ಜೆಗಳು ಎಂಬ ವಿಷಯದ ಕುರಿತ ವಿಚಾರಗೋಷ್ಠಿ, ಚಂದ್ರೋದಯ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಮತ್ತು ಚಂದ್ರಶೇಖರ ದಡದಪುರ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬರೀ ಅನುದಾನ ನೀಡಿದ ಮಾತ್ರಕ್ಕೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹೊಂದುವುದಿಲ್ಲ, ಅದರೊಂದಿಗೆ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ. ಒಂದು ಕಾಲದಲ್ಲಿ ಶೇ35ರಷ್ಟು ಜಿಡಿಪಿ ದರದೊಂದಿಗೆ ಎಲ್ಲರಿಗೂ ಉದ್ಯೋಗಾವಕಾಶ ನೀಡುವ ಸ್ವಾಭಿಮಾನಿ ದೇಶ ನಿರ್ಮಾಣದ ಉದ್ದೇಶ ಹೊಂದಲಾಗಿತ್ತು. ಆದರೆ ಭಾರತೀಯರಲ್ಲಿ ಕೀಳರಿಮೆ ಮೂಡಿಸಿ ಇಡೀ ದೇಶದ ಜನರನ್ನು ಕುಗ್ಗಿಸಲೆಂದೇ ಬ್ರಿಟಿಷರು ಜಾರಿಗೆ ತಂದ ಮಕಾಲೆ ಶಿಕ್ಷಣವನ್ನೇ ಈಗಲೂ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಅಳವಡಿಸಿಕೊಂಡು ಬಂದಿರುವುದರಿಂದ ನಮ್ಮ ದೇಶದ ಜಿಡಿಪಿ ದರ ಶೇ7ಕ್ಕೆ ಕುಸಿದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಇಂಥ ವ್ಯವಸ್ಥೆಯಿಂದ ನಿರುದ್ಯೋಗ, ಮೌಲ್ಯಾಧಾರಿತ ಸ್ವಾಭಿಮಾನಿ ಶಿಕ್ಷಣ ಬದಲಾಗಿ ನಿರಾಭಿಮಾನ ಬೋಧನೆಯೇ ತುಂಬಿ ಹೋಗಿದೆ. ಇದ್ದರಿಂದ ಕೃಷ್ಣದೇವರಾಯ ಗ್ರೇಟ್ ಎನ್ನುವ ಬದಲಾಗಿ ಬೇರೆಯವರನ್ನು ಗ್ರೇಟ್ ಎಂದು ಓದುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರು ತಮ್ಮ ಸ್ವಂತ ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇವೆ ಎನ್ನುವ ಭಾವನೆಯೊಂದಿಗೆ ಪಾಠ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಾಲೆಗಳ ಉನ್ನತೀಕರಣದ ಜೊತೆಗೆ ಶಿಕ್ಷಣ ನೀತಿಯನ್ನು ಸಹ ಉನ್ನತೀಕರಣವಾಗಬೇಕಿದ್ದು, ಈ ಕುರಿತು ಒಳ್ಳೆಯ ಚಿಂತನೆ ನಡೆಯಬೇಕಿದೆ ಎಂದು ಹೇಳಿದರು.
ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯ ಅಧ್ಯಕ್ಷ ಸುಧಾಕರ ಹೊಸಳ್ಳಿ ಸರ್ಕಾರಿ ಶಾಲೆಗಳ ಉನ್ನತೀಕರಣದ ಹೆಜ್ಜೆಗಳು ಎಂಬ ವಿಷಯದ ಕುರಿತ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಧ್ಯೇಯದೊಂದಿಗೆ ನಮ್ಮ ಸಮಿತಿಯು ರಾಜ್ಯದ ಎಲ್ಲೆಡೆ ಕಾರ್ಯನಿರ್ವಹಿಸುತ್ತಿದೆ. ಚಂದ್ರಶೇಖರ ದಡದಪುರ ಅವರು ತಾವು ದುಡಿದ ಹಣದಿಂದಲೇ ಸರ್ಕಾರಿ ಶಾಲೆಗಳ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಹಲವಾರು ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅವರ ಅಪಾರ ಸ್ನೇಹ ಬಳಗ ಅವರೊಂದಿಗೆ ಕೈಜೋಡಿಸಿ ಹೊಸದಾಗಿ ಚಂದ್ರೋದಯ ಚಾರಿಟಬಲ್ ಟ್ರಸ್ಟ್ ಆರಂಭಿಸಿ ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದ್ದಾರೆ. ಈ ಸೇವೆ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಯಚೂರಿನ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಾಕಷ್ಟು ಸುಧಾರಣೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.
ಆಚೀವರ್ಸ್ ಇಂಟರ್‌ನ್ಯಾಪನಲ್ ಸ್ಕೂಲ್ ಸಂಸ್ಥಾಪಕ ಕಾರ್ಯದರ್ಶಿ ಚಂದ್ರಶೇಖರ ದಡದಪುರ ಹಾಗೂ ಶ್ರೀಮತಿ ಸರಸ್ವತಿ ದಂಪತಿಯನ್ನು ಅಭಿನಂದಿಸಲಾಯಿತು. ಪಾಂಡವಪುರ ತಹಶೀಲ್ದಾರ್ ಎಸ್.ಸಂತೋಷ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.