ADVERTISEMENT

ಸಾಲಬಾಧೆ; ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 18:20 IST
Last Updated 26 ಜೂನ್ 2019, 18:20 IST
ಎನ್‌.ಬಿ.ಅಶ್ವಥ್
ಎನ್‌.ಬಿ.ಅಶ್ವಥ್   

ಮದ್ದೂರು: ಸಾಲಬಾಧೆಯಿಂದ ಕ್ರಿಮಿನಾಶಕ ಸೇವಿಸಿ, ಮಂಡ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈತ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಎನ್.ಬಿ‌‌.ಅಶ್ವಥ್‌ (25) ಮೃತ ರೈತ.

ಈತ ಜೂನ್ 13ರಂದು ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿದ್ದರು. ಮದ್ದೂರು ಮತ್ತು ಮಂಡ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. 4 ಎಕರೆ ಪ್ರದೇಶದಲ್ಲಿ ಭತ್ತ, ಕಬ್ಬು ಬೆಳೆದಿದ್ದರು ಎನ್ನಲಾಗಿದ್ದು, ನೀರಿನ ಅಭಾವದಿಂದ ಬೆಳೆಗಳು ಒಣಗಿದ್ದವು‌.

ADVERTISEMENT

ಬೆಳೆ ಬೆಳೆಯಲು ನೀಲಕಂಠನಹಳ್ಳಿ ವಿಎಸ್ಎಸ್‌ಬಿಎನ್‌ನಲ್ಲಿ ₹ 1.25 ಲಕ್ಷ, ಹೊನ್ನಲಗೆರೆಯ ವಿಜಯಾಬ್ಯಾಂಕ್‌ನಲ್ಲಿ ಒಡವೆ ಗಿರವಿ ಇಟ್ಟು ₹ 75,000, ₹ 3 ಲಕ್ಷ ಕೈಸಾಲ ಸಾಲ ಮಾಡಿಕೊಂಡಿದ್ದರು ಎಂದು ಮೃತ ರೈತನ ತಾಯಿ ಭಾಗ್ಯಮ್ಮ ತಿಳಿಸಿದ್ದಾರೆ ಎಂದು ಮದ್ದೂರು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.