ADVERTISEMENT

ಮಂಡ್ಯದಲ್ಲಿ ಇಂದು ಐವರಿಗೆ ಕೋವಿಡ್‌: 369ಕ್ಕೇರಿದ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 14:51 IST
Last Updated 21 ಜೂನ್ 2020, 14:51 IST
   

ಮಂಡ್ಯ: ಭಾನುವಾರ ಹೊಸದಾಗಿ ಐದು ಜನರಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 369ಕ್ಕೆ ಏರಿಕೆಯಾಗಿದೆ.

ಐವರಲ್ಲಿ ಮೂವರು ಕೆ.ಆರ್‌.ಪೇಟೆ ತಾಲ್ಲೂಕಿಗೆ ಸೇರಿದ್ದರೆ, ಒಬ್ಬರು ನಾಗಮಂಗಲ, ಒಬ್ಬರು ಪಾಂಡವಪುರ ತಾಲ್ಲೂಕಿಗೆ ಸೇರಿದ್ದಾರೆ. ಎಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ. ಜೂನ್‌ 2ನೇ ವಾರದಲ್ಲಿ ಬಂದ ಇವರನ್ನು ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಭಾನುವಾರ ವರದಿ ಬಂದಿದ್ದು ಕೋವಿಡ್‌ ಪತ್ತೆಯಾಗಿದೆ.

ಒಟ್ಟು ರೋಗಿಗಳಲ್ಲಿ 320 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 48 ಪ್ರಕರಣ ಸಕ್ರಿಯವಾಗಿದ್ದು ಎಲ್ಲರೂ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಇಲ್ಲಿಯವರೆಗೂ 13,810 ಮಂದಿಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ 13,165 ನೆಗೆಟಿವ್‌ ಬಂದಿದ್ದು 279 ಮಂದಿಯ ಫಲಿತಾಂಶ ಬರಬೇಕಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.