ADVERTISEMENT

20 ಕೆ.ಜಿ ಗಾಂಜಾ ಗಿಡ ವಶ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 14:59 IST
Last Updated 9 ಸೆಪ್ಟೆಂಬರ್ 2020, 14:59 IST
ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಕಚ್ಚೀಗೆರೆ ಗ್ರಾಮದ ಜಯರಾಮ್‌ನನ್ನು ಪೊಲೀಸರು ಬಂಧಿಸಿ, ಗಾಂಜಾ ಗಿಡ ವಶಕ್ಕೆ ಪಡೆದರು
ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಕಚ್ಚೀಗೆರೆ ಗ್ರಾಮದ ಜಯರಾಮ್‌ನನ್ನು ಪೊಲೀಸರು ಬಂಧಿಸಿ, ಗಾಂಜಾ ಗಿಡ ವಶಕ್ಕೆ ಪಡೆದರು   

ಮಂಡ್ಯ: ತಾಲ್ಲೂಕಿನ ಕಚ್ಚೀಗೆರೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯೊಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 20 ಕೆ.ಜಿ ಗಾಂಜಾ ಗಿಡ ವಶಪಡಿಸಿಕೊಳ್ಳಲಾಗಿದೆ.

ಗ್ರಾಮದ ಜಯರಾಮ್‌ ಬಂಧಿತ ಆರೋಪಿ. ಈತ ಗ್ರಾಮದಲ್ಲಿ ಕುಸಿದು ಬಿದ್ದಿದ್ದ ತನ್ನ ಹಳೇ ಮನೆಯ ನಿವೇಶನದಲ್ಲಿ ನಾಲ್ಕು ಗಾಂಜಾ ಗಿಡ ಬೆಳೆದಿದ್ದ. ಸೂಕ್ತ ಮಾಹಿತಿಯ ಆಧರಿಸಿ ಗ್ರಾಮಾಂತ ಠಾಣೆ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದವರ ಮೇಲೆ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.