
ಪ್ರಜಾವಾಣಿ ವಾರ್ತೆ
ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಮಂಡ್ಯ: ತಾಲ್ಲೂಕಿನ ಹಲ್ಲೆಗೆರೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎನ್.ಕೃಷ್ಣ (53) ಅವರು ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡರು.
ಪಂಚಾಯಿತಿ ಮಾಜಿ ಸದಸ್ಯೆ ಪುಟ್ಟಮಣಿ ಹಾಗೂ ವನಜಾಕ್ಷಿ, ಚಂದ್ರಶೇಖರ್, ಮುರಳಿ ಎಂಬುವರು ಪೊಲೀಸರಿಗೆ ಸುಳ್ಳು ದೂರು ನೀಡಿ, ಕಿರುಕುಳ ಕೊಟ್ಟಿರುವುದೇ ಆತ್ಮಹತ್ಯೆಗೆ ಕಾರಣ’ ಎಂದು ಮೃತರ ಪತ್ನಿ ಎಂ.ಎಸ್. ಶೋಭಾ ದೂರು ನೀಡಿದ್ದು, ಕೆರಗೋಡು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
‘ಸಂಬಂಧಿಕರ ಆಸ್ತಿ ವಿಚಾರದಲ್ಲಿ ಪಂಚಾಯ್ತಿಯಲ್ಲಿ ನನ್ನ ಪರವಾಗಿ ಸಹಕರಿಸದೇ ಎದುರುದಾರರ ಪರ ಸಹಕರಿಸಿದ್ದಾರೆ’ ಎಂದು ಪುಟ್ಟಮಣಿ ಅವರು ಕೃಷ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದರು’ ಎಂದು ಆರೋಪಿಸಿದ್ದಾರೆ.
‘ಡಿ.29ರಂದು ರಾತ್ರಿ ಕೃಷ್ಣ ಅವರು ಮನೆಯ ಬಾಗಿಲು ಬಡಿದರೆಂದು ಆರೋಪಿಸಿ, ಪುಟ್ಟಮಣಿ ಅವರು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರನ್ನು ಕರೆಸಿ ಅವಮಾನಿಸಿದ್ದರು’ ಎಂದೂ ದೂರಿದ್ದಾರೆ.