ಕೆ.ಆರ್.ಪೇಟೆ: ತಾಲ್ಲೂಕಿನ ಬೆಟ್ಟದ ಹೊಸೂರು ಗ್ರಾಮದ ಉದ್ಬವ ಬೋಳಾರೆ ರಂಗನಾಥಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ನಿಮಿತ್ತ ಹನುಮಂತೋತ್ಸವ ನಡೆಯಿತು.
ಬೂಕನಕೆರೆ ರಂಗಸ್ವಾಮಿ ಪಾಪಯ್ಯ ಮತ್ತು ಕುಟುಂಬದವರ ಸೇವಾರ್ಥದಲ್ಲಿ ನಡೆದ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ದೇವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
ಅರ್ಚಕರಾದ ಸುಂದರ್ ದೇಶಿಕ್ ಮತ್ತು ಮನೋಹರ ಆಚಾರ್ಯ ವಿಶೇಷ ಪೂಜೆ ನೆರವೇರಿಸಿದರು. ರಂಗಸ್ವಾಮಿ ಪಾಪಯ್ಯ, ಸೀತಾಲಕ್ಷ್ಮಿ ಸೇರಿದಂತೆ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಇಂದು ಬ್ರಹ್ಮರಥೋತ್ಸವ:
ಕಡೆ ಶ್ರಾವಣ ಶನಿವಾರದ ಪ್ರಯುಕ್ತ ಆಗಸ್ಟ್ 16ರಂದು ಬೆಟ್ಟದಲ್ಲಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಸಚಿವರು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.