ADVERTISEMENT

ಆರೋಗ್ಯ ತಪಾಸಣೆ ಶಿಬಿರ ಸದುಪಯೋಗ ಮಾಡಿಕೊಳ್ಳಿ

ತಜ್ಞ ವೈದ್ಯರ ಪಡೆ, ಹೋಬಳಿ ಮಟ್ಟದ ಕಡೆಗೆ: ಶಿಬಿರದಲ್ಲಿ ಗುಲ್ನಾಜ್ ಭಾನು ಕರೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 2:58 IST
Last Updated 11 ಡಿಸೆಂಬರ್ 2025, 2:58 IST
ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿ ಆಯೋಜಿಸಿದ್ದ ತಜ್ಞ ವೈದ್ಯರ ನಡೆ ಹೋಬಳಿ ಕೇಂದ್ರದ ಕಡೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು 
ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿ ಆಯೋಜಿಸಿದ್ದ ತಜ್ಞ ವೈದ್ಯರ ನಡೆ ಹೋಬಳಿ ಕೇಂದ್ರದ ಕಡೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು    

ಹಲಗೂರು: ‘ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದ್ದು, ಹಲಗೂರು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಭಾನು ಕರೆ ನೀಡಿದರು.

‘ತಜ್ಞ ವೈದ್ಯರ ಪಡೆ, ಹೋಬಳಿ ಮಟ್ಟದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪಿ.ವೀರಭದ್ರಪ್ಪ ಮಾತನಾಡಿ, ‘ಕೆಡಿಪಿ ಸಭೆಯಲ್ಲಿ ಶಾಸಕರು ನೀಡಿದ ಮಾರ್ಗದರ್ಶನದಂತೆ ಇಂದು ಹಲಗೂರಿನಲ್ಲಿ ತಜ್ಞ ವೈದ್ಯರಿಂದ ಶಿಬಿರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಕೇಂದ್ರಗಳಾದ ಬಿ.ಜಿ.ಪುರ, ಕಿರುಗಾವಲು, ಹಾಡ್ಲಿ ಕೇಂದ್ರ ಗಳಲ್ಲಿಯೂ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸುವ ಮೂಲಕ ತಾಲ್ಲೂಕಿನ ಜನತೆಯ ಆರೋಗ್ಯ ಕಾಪಾಡಲು ಶ್ರಮಿಸಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಶ್ರೀನಿವಾಸ್ ಮಾತನಾಡಿ, ಶಿಬಿರದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಉಚಿತವಾಗಿ ಔಷಧ ನೀಡಲಾಗುತ್ತದೆ ಎಂದರು.

ಶಿಬಿರದಲ್ಲಿ ಹೃದ್ರೋಗ ತಜ್ಞ ಡಾ.ಹೇಮಂತ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ರಚನಾ, ಡಾ.ಪ್ರಗತಿ, ಚರ್ಮರೋಗ ತಜ್ಞ ಮುಕುಂದ, ಮಕ್ಕಳ ತಜ್ಞರಾದ ಡಾ.ಹಂಸ, ಡಾ.ಶಿಲ್ಪಶ್ರೀ, ಡಾ.ಸ್ನೇಹ, ಡಾ.ಸಹನ, ಡಾ.ರಶ್ಮಿ ಸೇರಿದಂತೆ ಹಲವರು ರೋಗಿಗಳ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿದರು.

ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸಂಜಯ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಿ.ಲತಾ, ಸದಸ್ಯರಾದ ಜಮೀಲ್ ಪಾಷಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಸೌಮ್ಯಶ್ರೀ, ಶಿಶು ಅಭಿವೃದ್ಧಿ ಅಧಿಕಾರಿ ನಂಜಮಣಿ, ಮುಖಂಡರಾದ ಕುಂತೂರು ಗೋಪಾಲ್, ತೇಜುಕುಮಾರ್ ಶ್ಯಾಮು, ರಾಜಣ್ಣ, ಎಂ.ಶಿವಕುಮಾರ್, ನಾಗಸಿದ್ದಯ್ಯ, ಬಾಬು, ಅಮರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.