ಭಾರತೀನಗರ: ಸಮೀಪದ ಕೆ.ಎಂ.ದೊಡ್ಡಿಯ ಮಂಡ್ಯ ರಸ್ತೆ, ಮುಡೀನಹಳ್ಳಿ, ಮುಟ್ಟನಹಳ್ಳಿ, ಹನುಮಂತನಗರ, ಮಣಿಗೆರೆ, ಬೊಮ್ಮನಹಳ್ಳಿ, ಅಣ್ಣೂರು, ಕಾರ್ಕಹಳ್ಳಿ ಸೇರಿದಂತೆ ವಿವಿಧೆಡೆ ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಉರುಳಿವೆ.
ಇದರಿಂದ ಭಾರತೀನಗರ– ಹಲಗೂರು, ಭಾರತೀನಗರ– ಮಂಡ್ಯ, ಮದ್ದೂರು– ಮಳವಳ್ಳಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಭಾರತೀನಗರದಲ್ಲಿ ಕೆಶಿಪ್ ನಿರ್ಮಿಸಿದ ರಸ್ತೆ ಕಾಮಗಾರಿ ಸರಿಯಿಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿ ನದಿಯಂತೆ ಹರಿಯಿತು.
ಕೆಲವೆಡೆಗಳಲ್ಲಿ ರಾತ್ರಿಪೂರ ವಿದ್ಯುತ್ ವ್ಯತ್ಯಯವಾಗಿತ್ತು. ಸೆಸ್ಕ್, ಲೋಕೋಪಯೋಗಿ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ಮರಗಳನ್ನು ತೆರವುಗೊಳಿಸಿ, ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯ ಮಾಡಿದರು.
ಮುಡೀನಹಳ್ಳಿ ಗೇಟ್ ಬಳಿ ಭಾರಿ ಗಾತ್ರದ ಮರ ಹಲಗೂರು ಮುಖ್ಯ ರಸ್ತೆಗೆ ಉರುಳಿ ಬಸ್‌ಗಳು ರಸ್ತೆಯಲ್ಲಿ ಗಂಟೆಗಟ್ಟಲೇ ನಿಂತಿದ್ದು, ಪ್ರಯಾಣಿಕರಿಗೆ ಸಮಸ್ಯೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.