ADVERTISEMENT

ಮೇಲುಕೋಟೆ: ಡೇರಿ ಚುನಾವಣೆ ಫಲಿತಾಂಶಕ್ಕೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:24 IST
Last Updated 12 ಜನವರಿ 2024, 15:24 IST
ಮೇಲುಕೋಟೆಯಲ್ಲಿ ಹಾಲು ಉತ್ಪಾದಕರ ಸಹಾಕರ ಸಂಘದಲ್ಲಿ ನಡೆದ ಚುನಾವಣೆ.
ಮೇಲುಕೋಟೆಯಲ್ಲಿ ಹಾಲು ಉತ್ಪಾದಕರ ಸಹಾಕರ ಸಂಘದಲ್ಲಿ ನಡೆದ ಚುನಾವಣೆ.   

ಮೇಲುಕೋಟೆ: ಮೇಲುಕೋಟೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಿಸದಂತೆ ಕೋರ್ಟ್‌ ತಡೆ ನೀಡಿದೆ.

12 ನಿರ್ದೇಶಕರಿಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿ ರೈತ ಸಂಘ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. 345 ಮಂದಿ ಮತದಾರರಿದ್ದು , ಇವರಲ್ಲಿ 114 ಮಂದಿ ಹಾಲು ಉತ್ಪಾದಕರು ಅನರ್ಹರು, 231 ಮಂದಿ ಮತದಾನಕ್ಕೆ ಅನರ್ಹರು ಎನ್ನಲಾಗಿತ್ತು.

‘ಅನರ್ಹರು ಮತದಾನ ಮಾಡಬಹುದು, ಸ್ಪರ್ಧೆ ಮಾಡಲು ಅವಕಾಶವಿಲ್’ಲ ಎಂದು ಚುನಾವಣೆ ಆಯೋಗ ತಿಳಿಸಿತ್ತು. ಲಕ್ಷೀನರಸಿಂಹನ್,  ಈ ಮಧ್ಯೆ ಇಬ್ಬರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ‘ ಚುನಾವಣೆಗೆ ಸ್ಪರ್ಧಿಸ ಬಹುದು’ ಎಂಬ ಆದೇಶ ಪಡೆದು ಸ್ಪರ್ಧಿಸಿದ್ದರು. ಹೈ ಕೋರ್ಟ್ ಫಲಿತಾಂಶ ಪ್ರಕಟಿಸದಂತೆ ಆದೇಶ ನೀಡಿದೆ ಎಂದು ಚುನಾವಣಾಧಿಕಾರಿ ಆನಂದ ನಾಯಕ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.