ಕೆ.ಆರ್.ಪೇಟೆ: ‘ ಜಿಲ್ಲೆಯ ರಂಗಭೂಮಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ, ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿರುವ ಪ್ರೊ. ಜಯಪ್ರಕಾಶ ಗೌಡರ ನಿಷ್ಕಾಮ ಸೇವೆ ಯುವಜನರಿಗೆ ಮಾದರಿಯಾಗಬೇಕು’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು , ವಿವಿಧ ಪ್ರಗತಿಪರ ಸಂಘಟನೆಗಳಿಂದ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ , ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ ಅವರಿಗೆ ಮಂಡ್ಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿರುವ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಜಿಲ್ಲೆಯ ಹೊಸ ಪೀಳಿಗೆ ಪ್ರೊ. ಜೆಪಿ ಅವರ ಕಾಯಕ ನಿಷ್ಠೆ ಮತ್ತು ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ರಾಜ್ಯ ಆರ್.ಟಿ.ಒ. ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ , ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟ ವಾಸು ಮಾತನಾಡಿದರು. ಪ್ರಮುಖರಾದ ಬಿ.ಎಲ್.ದೇವರಾಜು, ಕಿಕ್ಕೇರಿ ಸುರೇಶ್, ಎಸಿಪಿ ಲಕ್ಷ್ಮೇಗೌಡ, ಕೆ.ಎಸ್.ಸೋಮಶೇಖರ್, ಕೆ.ಆರ್.ನೀಲಕಂಠ, ಬಳ್ಳೇಕೆರೆ ಮಂಜುನಾಥ್, ಮಾರೇನಹಳ್ಳಿ ಲೋಕೇಶ್ , ಬಲ್ಲೇನಹಳ್ಲಿ ಮಂಜುನಾಥ್, ಮುಖಂಡರಾದ ಬಿ.ನಂಜಪ್ಪ, ಅಂಚಿ ಸಣ್ಣಸ್ವಾಮೀಗೌಡ, ಎಸ್.ಎಲ್.ಮೋಹನ್, ಮುದುಗೆರೆ ರಾಜೇಗೌಡ, ನಂದಿನಿ ಜಯರಾಂ, ಮರುವನಹಳ್ಳಿ ಶಂಕರ್ ಭಾಗವಹಿಸಿದ್ದರು.
‘ಸಂಸ್ಕೃತಿ ಸಂಘಟಕ’
ಪ್ರೊ. ಜೆಪಿ ಸಚಿವ ಕೆ.ವಿ. ಶಂಕರಗೌಡ ಅವರ ಶಿಷ್ಯರಾಗಿಅವರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಶಂಕರಗೌಡ ಅವರ ಕಾಯಕ ನಿಷ್ಠೆ ಮತ್ತು ಸಂಘಟಿಸುವ ಸಂಸ್ಥಾಪಿಸುವ ಅಭಿವೃದ್ಧಿಗೊಳಿಸುವ ಕಾಯಕವನ್ನು ತಮ್ಮೊಳಗೆ ಆವಾಹಿಸಿಕೊಂಡು ನಾಲ್ಕು ದಶಕದಿಂದ ಜಿಲ್ಲೆಯಲ್ಲಿ ಸಂಸ್ಕೃತಿ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿರುವವರು.
ಕರ್ನಾಟಕ ಸಂಘದ ನೇತೃತ್ವ ವಹಿಸಿ ಎರಡು ದಶಕಗಳಿಂದ ಸಂಸ್ಥೆಯ ಅಭಿವೃದ್ಧಿಗೆ ಅವರ ಕಾರ್ಯ ಸ್ಮರಣೀಯ. ದಾನಿಗಳ ನೆರವು ಪಡೆದು ಸಂಘಕ್ಕೆ ಬಹುಮಹಡಿ ಕಟ್ಟಡ ನಿರ್ಮಾಣ ರಂಗಮಂದಿರ ನಿರ್ಮಾಣದ ಮಾಡಿದ್ದಾರೆ. 65 ದತ್ತಿನಿಧಿ ಪ್ರಶಸ್ತಿ ಸ್ಥಾಪಿಸಿ ಪ್ರತಿಭಾವಂತರನ್ನು ಸನ್ಮಾನಿಸಿದ್ದಾರೆ ಎಂದು ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.