ADVERTISEMENT

ಪಾಂಡವಪುರ: ಪುಟ್ಟಣ್ಣಯ್ಯ ನೆನಪಿನಲ್ಲಿ ಉದ್ಯೋಗ ಮೇಳ 23ರಂದು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:54 IST
Last Updated 22 ಡಿಸೆಂಬರ್ 2025, 2:54 IST
ಪಾಂಡವಪುರದಲ್ಲಿ ಡಿ.23ರಂದು ನಡೆಯಲಿರುವ ಉದ್ಯೋಗ ಮೇಳದ ಪೋಸ್ಟರ್‌ನ್ನು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣ‌ಯ್ಯ ಬಿಡುಗಡೆಗೊಳಿಸಿದರು. ಕೆ.ಟಿ.ಗೋವಿಂದೇಗೌಡ, ಎಸ್.ದಯಾನಂದ್,ಚಿಕ್ಕಾಡೆ ಹರೀಶ್, ಡಿ.ಬಿ.ರುಕ್ಮಾಂಗದ, ಬಂಕ್ ಉಮಾಶಂಕರ್ , ಸ್ವಾಮಿಗೌಡ, ಅನಿಲ್, ಲಕ್ಷ್ಮೇಗೌಡ ಇದ್ದಾರೆ.
ಪಾಂಡವಪುರದಲ್ಲಿ ಡಿ.23ರಂದು ನಡೆಯಲಿರುವ ಉದ್ಯೋಗ ಮೇಳದ ಪೋಸ್ಟರ್‌ನ್ನು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣ‌ಯ್ಯ ಬಿಡುಗಡೆಗೊಳಿಸಿದರು. ಕೆ.ಟಿ.ಗೋವಿಂದೇಗೌಡ, ಎಸ್.ದಯಾನಂದ್,ಚಿಕ್ಕಾಡೆ ಹರೀಶ್, ಡಿ.ಬಿ.ರುಕ್ಮಾಂಗದ, ಬಂಕ್ ಉಮಾಶಂಕರ್ , ಸ್ವಾಮಿಗೌಡ, ಅನಿಲ್, ಲಕ್ಷ್ಮೇಗೌಡ ಇದ್ದಾರೆ.   

ಪಾಂಡವಪುರ: ‘ವಿಶ್ವ ರೈತ ದಿನಾಚರಣೆ ಮತ್ತು ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನದ ಅಂಗವಾಗಿ ಡಿ.23ರಂದು ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ರೈತ ಸಂಘದ ವರಿಷ್ಠರಾದ ಸುನೀತಾ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಟ್ಟಣ್ಣಯ್ಯ ಫೌಂಡೇಶನ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಉದ್ಯೋಗದಾತ ಫೌಂಡೇಶನ್ ಸಹಯೋಗದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಯುವಕ ಯುವತಿಯರು ಮೇಳದಲ್ಲಿ ಭಾಗವಹಿಸಬಹುದು’ ಎಂದರು.

ಉದ್ಯೋಗದಾತ ಫೌಂಡೇಶನ್ ಅಧ್ಯಕ್ಷ ಡಿ.ಬಿ.ರುಕ್ಮಾಂಗದ ಮಾತನಾಡಿ, ‘ಮೇಳದಲ್ಲಿ ಸುಮಾರು 45 ರಿಂದ 50 ಪ್ರತಿಷ್ಠಿತ ಕಂಪನಿಗಳು ಭಾಗವಸಲಿದ್ದು, 5 ಸಾವಿರ ಉದ್ಯೋಗಾವಕಾಶ ಇರಲಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ ಹಾಗೂ ಎಲ್ಲಾ ರೀತಿಯ ಪದವೀಧರರು ಭಾಗವಹಿಸಬಹುದು’ ಎಂದು ತಿಳಿಸಿದರು.

ADVERTISEMENT

ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಎಸ್.ದಯಾನಂದ ಮಾತನಾಡಿ, 23ರಂದು ಮೈಸೂರಿನ ಇಲವಾಲದಲ್ಲಿ ವಿಶ್ವ ರೈತ ದಿನಾಚರಣೆ ಅಂಗವಾಗಿ ರೈತ ನಾಯಕ ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆ ಅನಾವರಣ ಹಾಗೂ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.

ಗೋಷ್ಠಿಯಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ರೈತ ಸಂಘದ ಮುಖಂಡರಾದ ಚಿಕ್ಕಾಡೆ ಹರೀಶ್, ಬಂಕ್ ಉಮಾಶಂಕರ್, ಪುರಸಭೆ ಸದಸ್ಯರಾದ ಎಚ್.ಎಲ್.ಮುರುಳೀಧರ್, ಲಕ್ಷ್ಮೇಗೌಡ, ಸ್ವಾಮಿಗೌಡ, ಅನಿಲ್ ಇದ್ದರು.

‘ಪುಟ್ಟಣ್ಣಯ್ಯ ರಂಗನಮನ ನಾಟಕೋತ್ಸವ ಇಂದಿನಿಂದ’

ಪುಟ್ಟಣ್ಣಯ್ಯ ಜನ್ಮದಿನ ಪ್ರಯುಕ್ತ 21ರಿಂದ 23ವರೆಗೆ ತಾಲ್ಲೂಕಿನ ಮೇಲುಕೋಟೆ ಪು.ತಿ.ನ ಕಲಾಮಂದಿರದಲ್ಲಿ ‘ಪುಟ್ಟಣ್ಣಯ್ಯ ರಂಗನಮನ–ಹೊಂಬಾಳೆ ನಾಟಕೋತ್ಸವ’ ಆಯೋಜಿಸಲಾಗಿದೆ ಎಂದು ರೈತ ಸಂಘದ ಹಿರಿಯ ಮುಖಂಡ ಕೆ.ಟಿ.ಗೋವಿಂದೇಗೌಡ ತಿಳಿಸಿದರು. 21ರಂದು ಸಂಜೆ 5.30ಕ್ಕೆ ನಾಟಕೋತ್ಸವವನ್ನು ಸಾಹಿತಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಪಾಟಿಸುವರು.  

ಸುನೀತಾ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ನಿರ್ದೇಶಕ ಟಿ.ಎನ್.ಸೀತಾರಾಮ್ ರಂಗನಮನ ಸಲ್ಲಿಸುವರು. ಅತಿಥಿಗಳಾಗಿ ಜನಪದ ಸೇವಾ ಟ್ರಸ್ಟ್‌ನ ಸಂತೋಷ್ ಕೌಲಗಿ ಪತ್ರಕರ್ತ ಹರವು ದೇವೇಗೌಡ ಭಾಗವಹಿಸುವರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡುವರು. ನಿವೃತ್ತ ಅಧಿಕಾರಿ ಎಂ.ಕೆ.ಕೆಂಪೇಗೌಡ ಅವರಿಗೆ ಕೆ.ಎಸ್.ಪುಟ್ಟಣ್ಣಯ್ಯ ಹಸಿರು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ನಾಟಕಗಳು: 21ರಂದು ‘ನನ್ನ ತೇಜಸ್ವಿ’ 22ರಂದು ‘ಕೊಡಲ್ಲ ಅಂದ್ರೆ ಕೊಡಲ್ಲ’ 23ರಂದು ‘ಒಡಲಾಳ’ ನಾಟಕ ಪ್ರದರ್ಶನಗೊಳ್ಳಲಿದ್ದು ಸಂಜೆ 6.30ಕ್ಕೆ ಪ್ರಾರಂಭಗೊಳ್ಳಲಿವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.