ಮೇಲುಕೋಟೆ: ಆಷಾಢ ಮಾಸದ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಹಿನ್ನಲೆ ಶನಿವಾರ ಚೆಲುವ ನಾರಾಯಣ ಸ್ವಾಮಿಯ ಕಲ್ಯಾಣೋತ್ಸವ ದೇವಾಲಯದ ಸಂಪ್ರದಾಯದಂತೆ ಜರುಗಿತು.
ಮುಮ್ಮಡಿ ಕೃಷ್ಣರಾಜ ಒಡೆಯರ್ ವರ್ಧಂತಿಯ ಅಂಗವಾಗಿ ನಡೆಸುವ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ಶುಕ್ರವಾರ ದೊಡ್ಡ ಉಯ್ಯಾಲೋತ್ಸವಕ್ಕೆ ಅಂಕುರಾರ್ಪಣೆಯ ಚಾಲನೆ ದೊರೆತ್ತಿದ್ದು. ಶನಿವಾ ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್ ಜನ್ಮ ವರ್ಧಂತಿ ಹಿನ್ನಲೆ ತಿರುನಾರಾಯಣ ಸ್ವಾಮಿಗೆ ಮಹಾಭಿಷೇಕ ನಡೆಯಿತು. ನಂತರ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ. ಕಲ್ಯಾಣೋತ್ಸವ ವೈಭವದಿಂದ ಜರುಗಿತು.
ಜು.16ರಂದು ವಜ್ರಖಚಿತ ಕೃಷ್ಣರಾಜಮುಡಿ ಕಿರೀಟಧಾರಣೆ ಮಹೋತ್ಸವ ನಡೆಯಲಿದೆ. ಜು. 18 ರಂದು ಗಜೇಂದ್ರ ಮೋಕ್ಷ, ಜು. 21 ಕಲ್ಯಾಣಿಯಲ್ಲಿ ತೀರ್ಥಸ್ನಾನ ಅವಭೃತ ನಡೆಯಲಿದೆ.
ಮಹಾರಾಜ ವಿಗ್ರಹಗಳಿಗೆ ಅಭಿಷೇಕ: ದೇವಾಲಯ ಜೀರ್ಣೋಧ್ಧಾರ ಮಾಡಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ ಮಹಾರಾಜರ ವಿಗ್ರಹಗಳಿಗೆ ಎಂದಿನಂತೆ ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆಯಿತು.
ಕೃಷ್ಣರಾಜಮುಡಿ ಹಿನ್ನಲೆ ದೇವಾಲಯಕ್ಕೆ ಸರಳ ದೀಪಾಲಂಕರ ವ್ಯವಸ್ಥೆ ಕಲ್ಪಿಸಲಾಗಿತು. ದೇವಾಲಯಕ್ಕೆ ಕೃಷಿ ಸಚಿವ ಎನ್ ಚೆಲುವರಾಯ ಸ್ವಾಮಿ ಪತ್ನಿ ಧನಲಕ್ಷ್ಮೀ ಭೇಟಿ ನೀಡಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.